Skip to content
Trending Topic

ಉಡುಪಿ: ಪ್ರದೀಪ್ ಪೂಜಾರಿ ಸಾವು – ಶವಾಗಾರದ ಮುಂದೆ ಕುಟುಂಬಸ್ಥರ ಆಕ್ರಂದನ

ಉಡುಪಿ: ಗುಂಪು ಹಲ್ಲೆಗೊಳಗಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯಡಕದ ಪ್ರದೀಪ್ ಪೂಜಾರಿ ಅವರು ಅಕ್ಟೋಬರ್ 30ರಂದು ಆಸ್ಪತ್ರೆಯ ಶೌಚಾಲಯದಲ್ಲಿ ಮೃತಪಟ್ಟಿದ್ದಾರೆ.

By Billavavani

ಅಕ್ಟೋಬರ್ 27ರಂದು ಯುವತಿಯ ಮನೆಯವರು ಹಾಗೂ ಅವರ ಬೆಂಬಲಿಗರು ಪ್ರದೀಪ್ ಪೂಜಾರಿ ಅವರ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಬಳಿಕ ಈ ಕುರಿತು ದೂರು ನೀಡಲು ತೆರಳಿದಾಗ ಪೊಲೀಸರು ದೂರು ಸ್ವೀಕರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಆಸ್ಪತ್ರೆಯಲ್ಲಿ ಪ್ರದೀಪ್ ಅವರ ಮೃತದೇಹವನ್ನು ಶವಾಗಾರದಲ್ಲಿ ಇರಿಸಲಾಗಿದ್ದು, ಶವಾಗಾರದ ಮುಂದೆ ಜಮಾಯಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆಯ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

Source: udayavani fb