ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜಯಂತಿ ಅಂಗವಾಗಿ ‘ಗುರು ಸಂದೇಶ ಸಾಮರಸ್ಯ ಜಾಥಾ’: ಪೂರ್ವಭಾವಿ ಸಭೆ ಯಶಸ್ವಿ
ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜನ್ಮ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.), ಉಡುಪಿ ಇದರ ನೇತೃತ್ವದಲ್ಲಿ ನಡೆಯಲಿರುವ "ಗುರು ಸಂದೇಶ ಸಾಮರಸ್ಯ ಜಾಥಾ" ಕಾರ್ಯಕ್ರಮದ...

ಉಡುಪಿ, ಜು. 24: ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜನ್ಮ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.), ಉಡುಪಿ ಇದರ ನೇತೃತ್ವದಲ್ಲಿ ನಡೆಯಲಿರುವ "ಗುರು ಸಂದೇಶ ಸಾಮರಸ್ಯ ಜಾಥಾ" ಕಾರ್ಯಕ್ರಮದ ಪೂರ್ವಭಾವಿ ಸಭೆಯು ಶುಕ್ರವಾರ (ಜು. 24) ಸಂಜೆ ಬನ್ನಂಜೆಯ ಬಿಲ್ಲವರ ಸೇವಾ ಸಂಘ (ರಿ.) ಸಭಾಂಗಣದಲ್ಲಿ ವೇದಿಕೆಯ ಅಧ್ಯಕ್ಷರಾದ ಶ್ರೀ ಪ್ರವೀಣ್ ಎಂ. ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.
ಸಭೆಯಲ್ಲಿ ರಾಜ್ಯ ಮಟ್ಟದ ಆನ್‌ಲೈನ್ ಭಾಷಣ ಸ್ಪರ್ಧೆಯ ಪೋಸ್ಟರ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಾಯಿತು. ಈ ಸ್ಪರ್ಧೆಯ ಮೂಲಕ ಯುವಜನರಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ, ಆದರ್ಶ ಹಾಗೂ ಸಾಮಾಜಿಕ ಸಾಮರಸ್ಯದ ಸಂದೇಶವನ್ನು ವ್ಯಾಪಕವಾಗಿ ತಲುಪಿಸುವ ಉದ್ದೇಶವನ್ನು ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಗೌರವಾಧ್ಯಕ್ಷರಾದ ದಿವಾಕರ್ ಸನಿಲ್, ಗೌರವ ಸಲಹೆಗಾರರಾದ ಸುಧಾಕರ್ ಪೂಜಾರಿ ಪಂಗಾಳ, ಮಾಧವ ಪಾಲನ್ ಕಾಪು, ಶೇಖರ್ ಸುವರ್ಣ ಮಾರ್ಪಳ್ಳಿ, ಓಬು ಪೂಜಾರಿ, ಶೇಖರ್ ಪೂಜಾರಿ ಹಿರಿಯಡ್ಕ, ಕೃಷ್ಣಾನಂದ ಮಲ್ಪೆ, ಗುರು ಸಂದೇಶ ಸಾಮರಸ್ಯ ಜಾಥಾದ ಸಂಚಾಲಕರು ಹಾಗೂ ಬಿಲ್ಲವ ಯುವ ವೇದಿಕೆ ಬ್ರಹ್ಮಾವರ ಘಟಕದ ಅಧ್ಯಕ್ಷರಾದ ಸಚಿನ್ ಪೂಜಾರಿ, ವೇದಿಕೆಯ ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ಶ್ರೀ ನಾರಾಯಣಗುರುಗಳ ಅನುಯಾಯಿಗಳು ಉಪಸ್ಥಿತರಿದ್ದರು.
ವೇದಿಕೆಯ ಪ್ರಧಾನ ಕಾರ್ಯದರ್ಶಿಯಾದ ಅಜೇಯ ಪೂಜಾರಿ ಮೇಲ್ಮನೆ ಅವರು ಸಭೆಗೆ ಸ್ವಾಗತ ಕೋರಿದ್ದು, ಕಾರ್ಯಕ್ರಮವನ್ನು ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು.
