ರಾಮ್ ಫ್ರೆಂಡ್ಸ್ ಕಟೀಲು ತಂಡದ 7ನೇ ವರ್ಷದ ಸಂಭ್ರಮಾಚರಣೆ; ಸಹಾಯ ಹಸ್ತ ನಿಧಿ ವಿತರಣೆ
ರಾಮ್ ಫ್ರೆಂಡ್ಸ್ (ರಿ.) ಕಟೀಲು ಸೇವಾ ತಂಡದ 7ನೇ ವರ್ಷದ ಸಂಭ್ರಮಾಚರಣೆ ಹಾಗೂ ಸಹಾಯ ಹಸ್ತ ನಿಧಿ ವಿತರಣೆ ಕಾರ್ಯಕ್ರಮವು ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಮಣಿಕುಮೇರಿ ಕೌಡೂರಿನ ಹೊಸ ಬೆಳಕು ಸೇವಾ ಟ್ರಸ್ಟ್ (ರಿ.) ಆಶ್ರಮದಲ್ಲಿ ನಡೆಯಿತು.

ಕಾರ್ಕಳ: ರಾಮ್ ಫ್ರೆಂಡ್ಸ್ (ರಿ.) ಕಟೀಲು ಸೇವಾ ತಂಡದ 7ನೇ ವರ್ಷದ ಸಂಭ್ರಮಾಚರಣೆ ಹಾಗೂ ಸಹಾಯ ಹಸ್ತ ನಿಧಿ ವಿತರಣೆ ಕಾರ್ಯಕ್ರಮವು ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಮಣಿಕುಮೇರಿ ಕೌಡೂರಿನ ಹೊಸ ಬೆಳಕು ಸೇವಾ ಟ್ರಸ್ಟ್ (ರಿ.) ಆಶ್ರಮದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಪಂಚಶಕ್ತಿ ಎಂಟರ್‌ಪ್ರೈಸಸ್‌ನ ಮಾಲಕರಾದ ರಂಜಿತ್ ಪೂಜಾರಿ ತೋಡಾರು ಉದ್ಘಾಟಿಸಿ, ರಾಮ್ ಫ್ರೆಂಡ್ಸ್ ತಂಡದ ಸಮಾಜಮುಖಿ ಸೇವಾ ಕಾರ್ಯಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಆಶ್ರಮಕ್ಕೆ ₹10,000 ಮೊತ್ತದ ಚೆಕ್ ಹಸ್ತಾಂತರಿಸಲಾಯಿತು. ಜೊತೆಗೆ ಸುಮಾರು ₹40,000 ಮೌಲ್ಯದ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. ಎರಡು ಅಶಕ್ತ ಕುಟುಂಬಗಳಿಗೆ ತಲಾ ₹10,000ರಂತೆ ಒಟ್ಟು ₹20,000 ಸಹಾಯಧನ ನೀಡಲಾಯಿತು. ನಿರಂತರವಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿರುವ ವಿವಿಧ ಸೇವಾ ತಂಡಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಲಾ ಕನ್‌ಸ್ಟ್ರಕ್ಷನ್ ಕಟೀಲು ಇದರ ಮಾಲಕರಾದ ಲೋಕಯ್ಯ ಸಾಲ್ಯಾನ್ ಕೊಂಡೇಲ, ಬಿರುವೆರ್ ಕುಡ್ಲ ಬಜ್ಪೆ ಘಟಕದ ಅಧ್ಯಕ್ಷರಾದ ಚಂದ್ರ ಪೂಜಾರಿ ಬಜ್ಪೆ, ಕಾರ್ಕಳ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶಿವಕುಮಾರ್, ಆಶ್ರಮದ ಮುಖ್ಯಸ್ಥರಾದ ತನುಲಾ ತರುಣ್, ರಾಮ್ ಫ್ರೆಂಡ್ಸ್ (ರಿ.) ಕಟೀಲು ತಂಡದ ಸ್ಥಾಪಕಾಧ್ಯಕ್ಷರಾದ ರಮಾನಂದ ಪೂಜಾರಿ ಕಟೀಲು ಸೇರಿದಂತೆ ತಂಡದ ಪದಾಧಿಕಾರಿಗಳು ಹಾಗೂ ನಿಸ್ವಾರ್ಥ ಸೇವಾ ಬಂಧುಗಳು ಉಪಸ್ಥಿತರಿದ್ದರು.
ರಾಮ್ ಫ್ರೆಂಡ್ಸ್ ತಂಡದ ಅಧ್ಯಕ್ಷರಾದ ಸುಮಂತ್ ಸುವರ್ಣ ಬಡಗಮಿಜಾರು ಅತಿಥಿಗಳನ್ನು ಸ್ವಾಗತಿಸಿದರು. ಕಿರಣ್ ಶೆಟ್ಟಿ ಅತ್ತೂರು ಕಾರ್ಯಕ್ರಮವನ್ನು ನಿರೂಪಿಸಿದರು.
ಸಮಾಜದ ಅಗತ್ಯವಿರುವವರ ನೆರವಿಗೆ ನಿರಂತರವಾಗಿ ಸ್ಪಂದಿಸುತ್ತಿರುವ ರಾಮ್ ಫ್ರೆಂಡ್ಸ್ ತಂಡದ ಸೇವಾ ಕಾರ್ಯಕ್ಕೆ ಕಾರ್ಯಕ್ರಮದಲ್ಲಿ ಮೆಚ್ಚುಗೆ ವ್ಯಕ್ತವಾಯಿತು.
