Skip to content
Billava News

ರಾಮಕುಂಜ ಕಾಲೇಜಿನ ವಿದ್ಯಾರ್ಥಿನಿ ರಕ್ಷಾ ಡಿ.ಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್

ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ರಕ್ಷಾ ಡಿ. ಅವರು ವಿಶಿಷ್ಟ ಸಾಧನೆ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಸೇರ್ಪಡೆಯಾಗಿದ್ದಾರೆ.

By Billavavani

ಕೈಗಳನ್ನು ಸೊಂಟದಲ್ಲಿರಿಸಿಕೊಂಡು ಮುಂಗೈಗಳನ್ನು ಜೊತೆಯಾಗಿ ಹಿಂದಕ್ಕೆ ಹಾಗೂ ಮುಂದಕ್ಕೆ ಚಲಿಸುವ ವಿಶೇಷ ಪ್ರದರ್ಶನವನ್ನು ರಕ್ಷಾ ಅವರು 30 ನಿಮಿಷಗಳ ಕಾಲ 3 ಸಾವಿರಕ್ಕೂ ಅಧಿಕ ಬಾರಿ ಮಾಡುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

1001173209.jpg

ಸೆಪ್ಟೆಂಬರ್ 26ರಂದು ಕಾಲೇಜಿನ ಸಭಾಂಗಣದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಮುಖ್ಯಸ್ಥ ಡಾ. ಮನೀಷ್ ವೈಷ್ಣೋಯಿ ಅವರ ಸಮ್ಮುಖದಲ್ಲಿ ಈ ದಾಖಲೆ ಪ್ರದರ್ಶನ ನಡೆಯಿತು. ಪ್ರದರ್ಶನದ ಬಳಿಕ ಡಾ. ಮನೀಷ್ ವೈಷ್ಣೋಯಿ ಅವರು ರಕ್ಷಾ ಅವರಿಗೆ ದಾಖಲೆಯ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.

ಒರುಂಬೋಡಿ, ಬಜತ್ತೂರು ಗ್ರಾಮದ, ಪುತ್ತೂರು ತಾಲೂಕಿನ ಶ್ರೀ ದರ್ನಪ್ಪ ಪೂಜಾರಿ ಹಾಗೂ ಶ್ರೀಮತಿ ವನಿತಾ ದಂಪತಿಗಳ ಪ್ರಥಮ ಪುತ್ರಿಯಾದ ಕು. ರಕ್ಷಾ ಡಿ. ಅವರು ಶ್ರೀರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ PCMB ವಿದ್ಯಾರ್ಥಿನಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ.