Skip to content
Billava News

ರೋಷನ್ ಸುವರ್ಣ ಆಲ್ ಕಾಲೇಜ್ ಸ್ಟೂಡೆಂಟ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡದ ನೂತನ ಸ್ಪೋರ್ಟ್ಸ್ ಸೆಕ್ರೆಟರಿಯಾಗಿ ಆಯ್ಕೆ

ರೋಷನ್ ಸುವರ್ಣ ಆಲ್ ಕಾಲೇಜ್ ಸ್ಟೂಡೆಂಟ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡದ ನೂತನ ಸ್ಪೋರ್ಟ್ಸ್ ಸೆಕ್ರೆಟರಿಯಾಗಿ ಆಯ್ಕೆ

By Billavavani
ರೋಷನ್ ಸುವರ್ಣ ಆಲ್ ಕಾಲೇಜ್ ಸ್ಟೂಡೆಂಟ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡದ ನೂತನ ಸ್ಪೋರ್ಟ್ಸ್ ಸೆಕ್ರೆಟರಿಯಾಗಿ ಆಯ್ಕೆ

ಮಂಗಳೂರು: All College Students’ Association, ದಕ್ಷಿಣ ಕನ್ನಡ ಇದರ ನೂತನ Sports Secretary ಆಗಿ ಮುಲ್ಕಿ, ಕಾರ್ನಾಡ್ ಮೂಲದ ರೋಷನ್ ಸುವರ್ಣ ಆಯ್ಕೆಯಾಗಿದ್ದಾರೆ.

ರೋಷನ್ ಸುವರ್ಣ ಅವರು ಪ್ರಸ್ತುತ Nitte Engineering Collegeನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿ ಸಂಘಟನೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಅವರು, ಸಂಘಟನೆಯ ಕ್ರೀಡಾ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಮೂಲತಃ ಮುಲ್ಕಿ ಕಾರ್ನಾಡ್ ನಿವಾಸಿಯಾಗಿರುವ ರೋಷನ್ ಸುವರ್ಣ ಅವರು ರಾಜೇಶ್ ಸುವರ್ಣ ಮತ್ತು ವೇದಾ ಸುವರ್ಣ ದಂಪತಿಯ ಪುತ್ರರಾಗಿದ್ದಾರೆ.

ನೂತನ ಸ್ಪೋರ್ಟ್ಸ್ ಸೆಕ್ರೆಟರಿಯಾಗಿ ಆಯ್ಕೆಯಾದ ರೋಷನ್ ಸುವರ್ಣ ಅವರಿಗೆ ವಿದ್ಯಾರ್ಥಿಗಳು, ಸ್ನೇಹಿತರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.