ತೋಚೋಡಿ ಮನೆತನದ ಓಡ್ಯಂತ್ತಾಯ ಶೇಖರ ಪೂಜಾರಿ ದೊಡ್ಡಮನೆ ನಿಧನ
ಸಸಿಹಿತ್ಲು: ತೋಚೋಡಿ ಮನೆತನದ ಓಡ್ಯಂತ್ತಾಯರಾದ ಶೇಖರ ಪೂಜಾರಿ ದೊಡ್ಡಮನೆ ಅವರು ಇಂದು ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.

ಸಸಿಹಿತ್ಲು: ತೋಚೋಡಿ ಮನೆತನದ ಓಡ್ಯಂತ್ತಾಯರಾದ ಶೇಖರ ಪೂಜಾರಿ ದೊಡ್ಡಮನೆ ಅವರು ಇಂದು ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಶ್ರೀಯುತರು ಸಸಿಹಿತ್ಲುವಿನ ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದು, ದೈವಸ್ಥಾನದ ಪೂಜಾ ಕೈಂಕರ್ಯಗಳು, ಆರಾಧನೆ ಹಾಗೂ ಧಾರ್ಮಿಕ ಸೇವಾ ಕಾರ್ಯಗಳಲ್ಲಿ ಅಪಾರ ನಿಷ್ಠೆ ಮತ್ತು ಭಕ್ತಿಯಿಂದ ತೊಡಗಿಸಿಕೊಂಡಿದ್ದರು. ದೈವಸೇವೆಯನ್ನೇ ಜೀವನದ ಧ್ಯೇಯವನ್ನಾಗಿಸಿಕೊಂಡಿದ್ದ ಅವರು ಭಕ್ತರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದರು.
ಶ್ರೀ ಸಾರಂತಾಯ ಗರೋಡಿಯ ದೈವಸೇವೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರ ಅಗಲಿಕೆಯು ದೈವಸ್ಥಾನಕ್ಕೆ ಹಾಗೂ ಸಮಸ್ತ ಭಕ್ತವೃಂದಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಸೇವಾ ಮನೋಭಾವ, ಧಾರ್ಮಿಕ ಬದ್ಧತೆ ಹಾಗೂ ದೈವಭಕ್ತಿಯನ್ನು ಭಕ್ತರು ಸದಾ ಸ್ಮರಿಸಲಿದ್ದಾರೆ.
ದಿವಂಗತ ಶೇಖರ ಪೂಜಾರಿ ದೊಡ್ಡಮನೆ ಅವರ ಆತ್ಮಕ್ಕೆ ಶ್ರೀ ಸಾರಂತಾಯ ಉಳ್ಳಾಯ ದೈವವು ಚಿರಶಾಂತಿಯನ್ನು ಕರುಣಿಸಲಿ ಹಾಗೂ ಅವರ ಕುಟುಂಬಸ್ಥರು ಮತ್ತು ಬಂಧುಬಳಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಭಕ್ತವೃಂದ ಪ್ರಾರ್ಥಿಸಿದೆ.
