Skip to content
Tulunadu Special

ಮೊದಲ ಮಹಿಳಾ ವಾಣಿಜ್ಯ ಪೈಲಟ್‌ ಲೈಸೆನ್ಸ್‌ (CPL) ಪಡೆದ ಉಡುಪಿ ಜಿಲ್ಲೆಯ ಕೌಡೂರಿನ ಶೈನಿ ಅಸ್ಮಾ ಸಲ್ದಾನಾ

ಉಡುಪಿ ಜಿಲ್ಲೆಯ ಕೌಡೂರಿನ ಶೈನಿ ಅಸ್ಮಾ ಸಲ್ದಾನಾ ಅವರು ವಾಣಿಜ್ಯ ಪೈಲಟ್‌ ಲೈಸೆನ್ಸ್‌ (CPL) ಪಡೆದು ಜಿಲ್ಲೆಯ ಮೊದಲ ಮಹಿಳಾ ವಾಣಿಜ್ಯ ಪೈಲಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

By Billavavani
ಮೊದಲ ಮಹಿಳಾ ವಾಣಿಜ್ಯ ಪೈಲಟ್‌  ಲೈಸೆನ್ಸ್‌ (CPL) ಪಡೆದ ಉಡುಪಿ ಜಿಲ್ಲೆಯ ಕೌಡೂರಿನ ಶೈನಿ ಅಸ್ಮಾ ಸಲ್ದಾನಾ

ಕಾರ್ಕಳ: ಉಡುಪಿ ಜಿಲ್ಲೆಯ ಕೌಡೂರಿನ ಶೈನಿ ಅಸ್ಮಾ ಸಲ್ದಾನಾ ಅವರು ವಾಣಿಜ್ಯ ಪೈಲಟ್‌ ಲೈಸೆನ್ಸ್‌ (CPL) ಪಡೆದು ಜಿಲ್ಲೆಯ ಮೊದಲ ಮಹಿಳಾ ವಾಣಿಜ್ಯ ಪೈಲಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕೌಡೂರಿನ ರಂಗಣ ಪಾಲ್ಕೆಯ ಅಶೋಕ್‌ ಜೇಕಬ್‌ ಸಲ್ದಾನಾ ಮತ್ತು ಮರಿಯಾ ಗ್ರೆಟ್ನಾ ಸಲ್ದಾನಾ ದಂಪತಿಯ ಪುತ್ರಿಯಾಗಿರುವ ಶೈನಿ, ಕಾರ್ಕಳದ ಕ್ರೈಸ್ಟ್‌ ಕಿಂಗ್‌ ಎಜುಕೇಶನಲ್‌ ಇನ್‌ಸ್ಟಿಟ್ಯೂಷನ್‌ನಲ್ಲಿ ಶಾಲಾ ಹಾಗೂ ಪದವಿಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿದರು.

ಬಾಲ್ಯದಿಂದಲೂ ಪೈಲಟ್‌ ಆಗಬೇಕೆಂಬ ಕನಸು ಕಂಡಿದ್ದ ಶೈನಿ, ಬೆಂಗಳೂರಿನಲ್ಲಿ ನಡೆದ ಇಂದಿರಾ ಗಾಂಧಿ ರಾಷ್ಟ್ರೀಯ ಉಡಾನ್‌ ಅಕಾಡೆಮಿ (IGRUA) ಪ್ರವೇಶ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದರು. ಬಳಿಕ ಉತ್ತರ ಪ್ರದೇಶದ ಫುರ್ಸತ್‌ಗಂಜ್‌ನಲ್ಲಿರುವ IGRUAದಲ್ಲಿ ಆಗಸ್ಟ್‌ 2023ರಿಂದ ವೃತ್ತಿಪರ ಪೈಲಟ್‌ ತರಬೇತಿ ಪಡೆದರು.

ತರಬೇತಿಯ ವಿವಿಧ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ಶೈನಿ ಅವರು ಕಮರ್ಷಿಯಲ್‌ ಪೈಲಟ್‌ ಲೈಸೆನ್ಸ್‌ (CPL) ಪಡೆದುಕೊಂಡಿದ್ದಾರೆ. ಈ ಸಾಧನೆಯೊಂದಿಗೆ ಅವರ ವೃತ್ತಿಜೀವನಕ್ಕೆ ಹೊಸ ಅಧ್ಯಾಯ ಆರಂಭವಾಗಿದ್ದು, ವಿಮಾನಯಾನ ಕ್ಷೇತ್ರಕ್ಕೆ ಕಾಲಿಡಲು ಬಯಸುವ ಉಡುಪಿ ಜಿಲ್ಲೆಯ ಯುವತಿಯರಿಗೆ ಅವರು ಸ್ಫೂರ್ತಿಯಾಗಿದ್ದಾರೆ.

ವಿಮಾನಯಾನ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಶೈನಿ ಅವರ ಸಾಧನೆ ವಿಶೇಷ ಗಮನ ಸೆಳೆದಿದೆ. ಅವರ ಸಾಧನೆಗೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಕಾರ್ಕಳದ ನಿವಾಸಿಗಳು ಅಭಿನಂದನೆ ಸಲ್ಲಿಸಿದ್ದಾರೆ.