Skip to content
Billava News

NEET ಪರೀಕ್ಷೆಯಲ್ಲಿ 96% ಅಂಕ: ಸಿದ್ದಕಟ್ಟೆಯ ಸಂಜನಾ ಜೆ. ಕೊಯಿಲ ಅವರಿಗೆ ವೈದ್ಯಕೀಯ ಸೀಟ್

ಸಿದ್ದಕಟ್ಟೆ: ಬಿಲ್ಲವ ಸಂಘ ಸಿದ್ದಕಟ್ಟೆ ಇದರ ಸದಸ್ಯರಾದ ಜಗದೀಶ್ ಕೊಯಿಲ ಅವರ ಪುತ್ರಿ ಕುಮಾರಿ ಸಂಜನಾ ಜೆ. ಕೊಯಿಲ ಅವರು NEET ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, 96% ಅಂಕಗಳನ್ನು ಪಡೆದು ಅರ್ಹತೆ ಗಳಿಸಿದ್ದಾರೆ.

By Billavavani

ಇದೀಗ ಅವರು ಎ.ಜೆ. ವೈದ್ಯಕೀಯ ಕಾಲೇಜಿನಲ್ಲಿ ಸರ್ಕಾರಿ ಕೋಟಾದ ಸೀಟ್ ಪಡೆದು ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾರೆ.

ಸಂಜನಾ ಜೆ. ಕೊಯಿಲ ಅವರ ಈ ಸಾಧನೆಗೆ ಬಿಲ್ಲವ ಸಂಘ ಸಿದ್ದಕಟ್ಟೆಯ ಸಮಸ್ತ ಸಮಾಜ ಬಾಂಧವರು ಹರ್ಷ ವ್ಯಕ್ತಪಡಿಸಿದ್ದು, ಅವರ ಮುಂದಿನ ವೈದ್ಯಕೀಯ ಶಿಕ್ಷಣ ಹಾಗೂ ಭವಿಷ್ಯದ ವೃತ್ತಿಜೀವನ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.

ಬಿಲ್ಲವ ಸಂಘ ಸಿದ್ದಕಟ್ಟೆ ಹಾಗೂ ಸಮಸ್ತ ಸಮಾಜ ಬಾಂಧವರ ಪರವಾಗಿ ಕುಮಾರಿ ಸಂಜನಾ ಜೆ. ಕೊಯಿಲ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು.