Skip to content
Billava News

ಗುರು ಪೂರ್ಣಿಮೆಯ ಅಂಗವಾಗಿ ಬಜಪೆ ಗುರು ಸನ್ನಿದಾನದಲ್ಲಿ ವಿಶೇಷ ಭಜನಾ ಸಂಕೀರ್ತನೆ

ಬಜಪೆ–ಕರಂಬಾರುದಲ್ಲಿರುವ ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ.) ವತಿಯಿಂದ ಗುರು ಪೂರ್ಣಿಮೆಯ ಪ್ರಯುಕ್ತ ಜುಲೈ 29, 2026ರಂದು ಗುರು ಸನ್ನಿದಾನದಲ್ಲಿ ವಿಶೇಷ ಭಜನಾ ಸಂಕೀರ್ತನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿ-ಶ್ರದ್ಧೆಯಿಂದ ನೆರವೇರಿದವು.

By Billavavani

1.jpeg

ಸಂಜೆ 4.30ರಿಂದ 6.00 ಗಂಟೆಯವರೆಗೆ ಯುವವಾಹಿನಿ ಬಜಪೆ ಘಟಕದ ಸದಸ್ಯರು ಭಜನಾ ಸೇವೆ ಸಲ್ಲಿಸಿದರು. ಬಳಿಕ ಸಂಜೆ 6.00ರಿಂದ 7.00 ಗಂಟೆಯವರೆಗೆ ಮಂದಿರದ ಭಜನಾ ತರಬೇತಿ ತಂಡದ ಮಕ್ಕಳಿಂದ ಭಜನಾ ಸಂಕೀರ್ತನೆ ನಡೆಯಿತು. ನಂತರ ಸಂಜೆ 7.00ರಿಂದ 8.00 ಗಂಟೆಯವರೆಗೆ ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಸದಸ್ಯರು ಭಜನಾ ಸಂಕೀರ್ತನೆ ನಡೆಸಿ ಭಕ್ತಿಭಾವ ಮೆರೆದರು.

2.jpeg

ಭಜನಾ ಕಾರ್ಯಕ್ರಮದ ಬಳಿಕ ಗುರುವರ್ಯರಿಗೆ ವಿಶೇಷ ಗುರುಪೂಜೆ ನೆರವೇರಿಸಲಾಯಿತು. ನಂತರ ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಅನ್ನಪ್ರಸಾದ ಸೇವೆ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರು ಪೂರ್ಣಿಮೆಯನ್ನು ಭಕ್ತಿಭಾವದಿಂದ ಆಚರಿಸಿದರು.

4.jpeg