ಶ್ರೀ ಕೃಷ್ಣ ಯುವಕ ಮಂಡಲದ 3ನೇ ವರ್ಷದ ಕೆಸರು ಡ್ ಒಂಜಿ ದಿನ ಕ್ರೀಡಾಕೂಟ
ಶ್ರೀ ಕೃಷ್ಣ ಯುವಕ ಮಂಡಲ (ರಿ.) ನೂಜಿ ಇದರ ವತಿಯಿಂದ 3ನೇ ವರ್ಷದ ‘ಕೆಸರುಡ್ ಒಂಜಿ ದಿನ’ ಕ್ರೀಡಾಕೂಟವು ಆಗಸ್ಟ್ 16, 2026ರಂದು ನೂಜಿಯ ಜಯದೇವ್ ಭಟ್ ಅವರ ಗದ್ದೆಯಲ್ಲಿ ಸಂಭ್ರಮದಿಂದ ನಡೆಯಿತು

ನೂಜಿ: ಶ್ರೀ ಕೃಷ್ಣ ಯುವಕ ಮಂಡಲ (ರಿ.) ನೂಜಿ ಇದರ ವತಿಯಿಂದ 3ನೇ ವರ್ಷದ ‘ಕೆಸರುಡ್ ಒಂಜಿ ದಿನ’ ಕ್ರೀಡಾಕೂಟವು ಆಗಸ್ಟ್ 16, 2026ರಂದು ನೂಜಿಯ ಜಯದೇವ್ ಭಟ್ ಅವರ ಗದ್ದೆಯಲ್ಲಿ ಸಂಭ್ರಮದಿಂದ ನಡೆಯಿತು.

ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಕೃಷ್ಣ ಯುವಕ ಮಂಡಲದ ಅಧ್ಯಕ್ಷರಾದ ದೇವಿ ಪ್ರಮೋದ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸತೀಶ್ ಆಳ್ವ ಇರಾ ಬಾಳಿಕೆ, ಮೋಹನದಾಸ ಶೆಟ್ಟಿ ಪುದ್ದೋಟು, ಜಯದೇವ್ ಭಟ್ ನೂಜಿ, ದಿವಾಕರ ನಾಯಕ್ ಕುಂಟೂರು ಹಾಗೂ ಗೋವಿಂದ ನಾಯಕ್ ಆಳಾಬೆ ಉಪಸ್ಥಿತರಿದ್ದರು.
ಕೆಸರು ಗದ್ದೆಯಲ್ಲಿ ನಡೆದ ವಿವಿಧ ಕ್ರೀಡಾ ಚಟುವಟಿಕೆಗಳು ಹಾಗೂ ಸ್ಪರ್ಧೆಗಳು ಕ್ರೀಡಾಭಿಮಾನಿಗಳ ಗಮನ ಸೆಳೆದವು. ಯುವಕರು, ಮಕ್ಕಳು ಸೇರಿದಂತೆ ಭಾಗವಹಿಸಿದವರು ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಪುಸ್ತಕ ವಿತರಣೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕ್ರೀಡೆ, ಶಿಕ್ಷಣ ಹಾಗೂ ಸಾಮಾಜಿಕ ಕಾಳಜಿಯನ್ನು ಒಗ್ಗೂಡಿಸಿದ ಕಾರ್ಯಕ್ರಮವು ಸ್ಥಳೀಯರಲ್ಲಿ ಮೆಚ್ಚುಗೆಗೆ ಪಾತ್ರವಾಯಿತು.
