ಬಂಟ್ವಾಳ: ಶ್ರೀ ನಾರಾಯಣ ಗುರು ವಿಚಾರ ವೇದಿಕೆಗೆ ನೂತನ ಪದಾಧಿಕಾರಿಗಳ ಆಯ್ಕೆ
ಬಂಟ್ವಾಳ: ಶ್ರೀ ನಾರಾಯಣ ಗುರು ವಿಚಾರ ವೇದಿಕೆ (ರಿ.) ದಕ್ಷಿಣ ಕನ್ನಡ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸೆ. 8ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಡೆಯಿತು.

ಬಂಟ್ವಾಳ: ಶ್ರೀ ನಾರಾಯಣ ಗುರು ವಿಚಾರ ವೇದಿಕೆ (ರಿ.) ದಕ್ಷಿಣ ಕನ್ನಡ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸೆ. 8ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಡೆಯಿತು.
ಸಮಾಜದ ಹಿತಾಸಕ್ತಿ, ಸಂಘಟನೆ, ಶೈಕ್ಷಣಿಕ ಪ್ರಗತಿ, ಸಾಮಾಜಿಕ ಜಾಗೃತಿ ಹಾಗೂ ಶ್ರೀ ನಾರಾಯಣ ಗುರುಗಳ ತತ್ವ–ಸಿದ್ಧಾಂತಗಳನ್ನು ಜನಮಾನಸಕ್ಕೆ ತಲುಪಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ನೂತನ ಜಿಲ್ಲಾಧ್ಯಕ್ಷರಾಗಿ ಲಕ್ಷ್ಮೀಶ ಸುವರ್ಣ, ಪ್ರಧಾನ ಕಾರ್ಯದರ್ಶಿಯಾಗಿ ಸಂಪತ್ ಕುಕ್ಯಾನ್ ಭಂಡಾರ ಮನೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ದಿನೇಶ್ ಸುವರ್ಣ ರಾಯಿ, ನವೀನ್ ಕೋಟ್ಯಾನ್, ಜಯರಾಮ್ ಪೂಜಾರಿ ಬಾಳಿಲ, ನಾರಾಯಣ ಪೂಜಾರಿ ಪಳ್ಳಿಕಂಡ ಹಾಗೂ ಸಚಿನ್ ಸಾಲ್ಯಾನ್ ಆಯ್ಕೆಯಾಗಿದ್ದಾರೆ.
ಸಂಘಟನಾ ಕಾರ್ಯದರ್ಶಿಗಳಾಗಿ ಎಂ.ಕೆ. ಪ್ರಸಾದ್ ಹಾಗೂ ಹರಿಕೃಷ್ಣ ಬರಿಮಾರ್, ಜೊತೆ ಕಾರ್ಯದರ್ಶಿಗಳಾಗಿ ನಾಗೇಶ್ ಎಕ್ಕೂರು ಹಾಗೂ ಶುಭಕರ್ ಸಾವ್ಯ, ಕೋಶಾಧಿಕಾರಿಗಳಾಗಿ ಗುರುರಾಜ್ ಗುರಿಪಳ್ಳ ಹಾಗೂ ಕಿಶೋರ್ ಮಂಚಿ, ಪ್ರಚಾರ ಪ್ರಮುಖರಾಗಿ ರಾಜ್ ಪವಿ ಬಿಲ್ಲವ ಆಯ್ಕೆಯಾಗಿದ್ದಾರೆ.
ಸಮಿತಿ ಸದಸ್ಯರಾಗಿ ಕುಶಲ ಪೂಜಾರಿ ತಾಳಿಪಾಡಿ, ನಿಶಾಂತ್ ಪೂಜಾರಿ, ಸುಕುಮಾರ್ ಎಡಪದವು, ಸುನಿಲ್ ಕನ್ಯಾಡಿ ಹಾಗೂ ಅಶ್ವಿನ್ ಪೂಜಾರಿಮಾಂಟ್ರಾಡಿ ಅವರನ್ನು ಆಯ್ಕೆ ಮಾಡಲಾಗಿದೆ.
ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದ ಸಮಿತಿಗಳನ್ನು ರಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಅ.11ರಂದು ಮಂಗಳೂರಿನಲ್ಲಿ ನಡೆಯಲಿದೆ.
ಶ್ರೀ ನಾರಾಯಣ ಗುರುಗಳ “ಒಂದು ಜಾತಿ, ಒಂದು ಮತ, ಒಬ್ಬ ದೇವರು – ಮನುಷ್ಯನಿಗೆ” ಎಂಬ ಮಾನವೀಯ ಸಂದೇಶವನ್ನು ಸಮಾಜದ ಎಲ್ಲ ವರ್ಗಗಳಿಗೂ ತಲುಪಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು ನೂತನ ತಂಡ ಮುಂದಾಗಲಿದೆ ಎಂದು ತಿಳಿಸಲಾಗಿದೆ.
