Skip to content
Billava News

ಶಿರ್ತಾಡಿಯಲ್ಲಿ ಶ್ರೀ ಸಾಯಿ ಡೆವಲಪರ್ಸ್ ಮತ್ತು ಶ್ರೀ ಸಾಯಿ ಡೆಕೋರೇಟರ್ಸ್ ನೂತನ ಕಚೇರಿ ಶುಭಾರಂಭ

ಮೂಡಬಿದಿರೆ: ಸಿವಿಲ್ ಇಂಜಿನಿಯರ್ ಅಶ್ವಿತ್ ಪೂಜಾರಿ ಅವರ ನೇತೃತ್ವದಲ್ಲಿ ಆರಂಭಗೊಂಡಿರುವ ಶ್ರೀ ಸಾಯಿ ಡೆವಲಪರ್ಸ್ ಕನ್ಸ್ಟ್ರಕ್ಷನ್ ಮತ್ತು ಶ್ರೀ ಸಾಯಿ ಡೆಕೋರೇಟರ್ಸ್ ಸಂಸ್ಥೆಗಳ ನೂತನ ಕಚೇರಿಯು...

By Billavavani
ಶಿರ್ತಾಡಿಯಲ್ಲಿ ಶ್ರೀ ಸಾಯಿ ಡೆವಲಪರ್ಸ್ ಮತ್ತು ಶ್ರೀ ಸಾಯಿ ಡೆಕೋರೇಟರ್ಸ್ ನೂತನ ಕಚೇರಿ ಶುಭಾರಂಭ

ಮೂಡಬಿದಿರೆ: ಸಿವಿಲ್ ಇಂಜಿನಿಯರ್ ಅಶ್ವಿತ್ ಪೂಜಾರಿ ಅವರ ನೇತೃತ್ವದಲ್ಲಿ ಆರಂಭಗೊಂಡಿರುವ ಶ್ರೀ ಸಾಯಿ ಡೆವಲಪರ್ಸ್ ಕನ್ಸ್ಟ್ರಕ್ಷನ್ ಮತ್ತು ಶ್ರೀ ಸಾಯಿ ಡೆಕೋರೇಟರ್ಸ್ ಸಂಸ್ಥೆಗಳ ನೂತನ ಕಚೇರಿಯು ನವೆಂಬರ್ 19ರಂದು ಶಿರ್ತಾಡಿಯಲ್ಲಿ ಶುಭಾರಂಭಗೊಂಡಿತು.

1001248884.jpg

ನೂತನ ಕಚೇರಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಅವರು ಉದ್ಘಾಟಿಸಿ ಶುಭ ಹಾರೈಸಿದರು.

1001248885.jpg

ಈ ಸಂದರ್ಭದಲ್ಲಿ ಮೂಡಬಿದಿರೆಯ ಚೌಟರ ಅರಮನೆಯ ಕುಲದೀಪ್ ಎಂ. ಸೇರಿದಂತೆ ಸ್ಥಳೀಯ ಹಲವು ಗಣ್ಯರು, ಉದ್ಯಮಿಗಳು ಹಾಗೂ ಹಿತೈಷಿಗಳು ಉಪಸ್ಥಿತರಿದ್ದು, ನೂತನ ಉದ್ಯಮಗಳ ಯಶಸ್ಸಿಗೆ ಶುಭ ಹಾರೈಸಿದರು.

1001248886.jpg

ನಿರ್ಮಾಣ ಕ್ಷೇತ್ರದಲ್ಲಿ ಗುಣಮಟ್ಟದ ಸೇವೆ ಹಾಗೂ ಅಲಂಕಾರಿಕ ಕ್ಷೇತ್ರದಲ್ಲಿ ಸೃಜನಶೀಲತೆಯೊಂದಿಗೆ ಗ್ರಾಹಕರ ಕನಸಿನ ಮನೆ ಮತ್ತು ಸುಂದರ ಕಾರ್ಯಕ್ರಮಗಳಿಗೆ ರೂಪ ನೀಡುವ ಉದ್ದೇಶದಿಂದ ಶ್ರೀ ಸಾಯಿ ಡೆವಲಪರ್ಸ್ ಮತ್ತು ಶ್ರೀ ಸಾಯಿ ಡೆಕೋರೇಟರ್ಸ್ ಸಂಸ್ಥೆಗಳು ಕಾರ್ಯಾರಂಭಿಸಿವೆ.