Skip to content
Billava News

ಯೋಗಾಸನ ಸ್ಪರ್ಧೆಯಲ್ಲಿ ತನ್ವಿ ಅಂಚನ್‌ಗೆ ಚಿನ್ನದ ಪದಕ; ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆ

ಹೈದರಾಬಾದ್: ವಿದ್ಯಾಭಾರತಿ ಜ್ಞಾನ ಕೇಂದ್ರ, ನಾದರ್‌ಗುಲ್, ಹೈದರಾಬಾದ್‌ನಲ್ಲಿ ಸೆಪ್ಟೆಂಬರ್ 5, 6 ಮತ್ತು 7ರಂದು ನಡೆದ ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರ ಸಮಿತಿ ಯೋಗಾಸನ ಸ್ಪರ್ಧೆಯಲ್ಲಿ ತನ್ವಿ ಅಂಚನ್ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ.

By Billavavani

ಸಂಪ್ರದಾಯಿಕ ಯೋಗಾಸನ ಸ್ಪರ್ಧೆಯ ಬಾಲ ವರ್ಗದ (17 ವರ್ಷ ಒಳಗಿನ) ವಿಭಾಗದಲ್ಲಿ ತನ್ವಿ ಅಂಚನ್ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈ ಅತ್ಯುತ್ತಮ ಸಾಧನೆಯ ಮೂಲಕ ತನ್ವಿ ಅಂಚನ್ ಅವರು ಅಸ್ಸಾಂನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ತನ್ವಿ ಅಂಚನ್ ಅವರು ಪುತ್ತೂರು ತಾಲೂಕಿನ ಬೆಳ್ಳಾರೆ ನಿವಾಸಿಗಳಾದ ದಯಾನಂದ ಸಾಲಿಯಾನ್ ಮತ್ತು ಗೀತಾ ಅಂಚನ್ ಅವರ ಪುತ್ರಿ.

ತನ್ವಿ ಅಂಚನ್ ಅವರ ಈ ಸಾಧನೆಗೆ ವಿದ್ಯಾಭಾರತಿ ಜ್ಞಾನ ಕೇಂದ್ರದ ಶಿಕ್ಷಕರು, ಪೋಷಕರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದು, ರಾಷ್ಟ್ರಮಟ್ಟದ ಸ್ಪರ್ಧೆಯಲ್ಲೂ ಉತ್ತಮ ಪ್ರದರ್ಶನ ನೀಡಿ ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದ್ದಾರೆ.