ಟೀಮ್ ಸತ್ಯಜಿತ್ ಸುರತ್ಕಲ್ ವಾರ್ಷಿಕ ಸಭೆ: ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ‘ಗುಡ್ ಟಚ್–ಬ್ಯಾಡ್ ಟಚ್’ ಹಾಗೂ ಸ್ವಯಂ ರಕ್ಷಣಾ ಕೌಶಲ್ಯ ಕಾರ್ಯಾಗಾರ
ಟೀಮ್ ಸತ್ಯಜಿತ್ ಸುರತ್ಕಲ್‌ನ ವಾರ್ಷಿಕ ಸಭೆಯು ಇಂದು ತುಂಬೆಯ ಶಾರದಾ ಸಭಾ ಭವನದಲ್ಲಿ ನಡೆಯಿತು.

ತುಂಬೆ: ಟೀಮ್ ಸತ್ಯಜಿತ್ ಸುರತ್ಕಲ್‌ನ ವಾರ್ಷಿಕ ಸಭೆಯು ಇಂದು ತುಂಬೆಯ ಶಾರದಾ ಸಭಾ ಭವನದಲ್ಲಿ ನಡೆಯಿತು.
ಸಭೆಯಲ್ಲಿ ಒಟ್ಟು 8 ತಾಲ್ಲೂಕು ಸಮಿತಿಗಳನ್ನು ರಚಿಸಿ, ಪ್ರತಿ ತಾಲ್ಲೂಕಿನಲ್ಲಿ ವಿವಿಧ ಸಮಾಜ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಕುರಿತು ಮಹತ್ವದ ಚರ್ಚೆ ನಡೆಯಿತು. ಇದೇ ವೇಳೆ ಸತ್ಯಜಿತ್ ಸುರತ್ಕಲ್ ಅವರ ರಾಜಕೀಯ ಬೆಳವಣಿಗೆಯ ಕುರಿತು ಕಾರ್ಯಕರ್ತರು ಹಾಗೂ ಮುಖಂಡರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿ, ಮುಂದಿನ ಕಾರ್ಯಯೋಜನೆಗಳನ್ನು ರೂಪಿಸಲಾಯಿತು.

ಜಿಲ್ಲೆಯ ವಿವಿಧ ತಾಲೂಕುಗಳ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ‘ಗುಡ್ ಟಚ್–ಬ್ಯಾಡ್ ಟಚ್’ ಹಾಗೂ ಸ್ವಯಂ ರಕ್ಷಣಾ ಕೌಶಲ್ಯ (Self Defence Skill) ಕಾರ್ಯಾಗಾರಗಳನ್ನು ಆರಂಭಿಸುವ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಅಕ್ಟೋಬರ್ 4ರಂದು ಮಂಗಳೂರಿನಲ್ಲಿ ನಡೆಯಲಿರುವ ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ವೈದ್ಯಕೀಯ ತಪಾಸಣಾ ಶಿಬಿರದ ಕುರಿತು ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸತ್ಯಜಿತ್ ಸುರತ್ಕಲ್, ರವಿ ರಾಜ್ ಬಿಸಿರೋಡ್, ಜಗದೀಶ್ ನೆತ್ತರಕೆರೆ, ಸಂತೋಷ್ ಶೆಟ್ಟಿ ಪೊಳಲಿ, ಸಂದೀಪ್ ಪೂಜಾರಿ ಪಂಪ್ವೆಲ್, ಧನಂಜಯ್ ಕುಂದಾಪುರ, ಸಂದೀಪ್ ಶೆಟ್ಟಿ ಅಂಬ್ಲಮೊಗರು, ಯೋಗೀಶ್ ಬಂಟ್ವಾಳ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
