Skip to content
Tulunadu Special

ತುಳುನಾಡ ದೈವ ಪರಿಚಾರಕರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನಿಂದ ‘ಕೊಡಿ ಆಡಿತ ನೀರೇಲ್ ಇರುವರದ ಲೇಸ್ ದ ಗೌಜಿ’

ಮಂಗಳೂರು: ತುಳುನಾಡ ದೈವ ಪರಿಚಾರಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಅ.5ರಂದು ಬೆಳಗ್ಗೆ 9 ಗಂಟೆಯಿಂದ ‘ಕೊಡಿ ಆಡಿತ ನೀರೇಲ್ ಇರುವರದ ಲೇಸ್ ದ ಗೌಜಿ’ ಕಾರ್ಯಕ್ರಮ ಆಯೋಜಿಸಲಾಗಿದೆ.

By Billavavani

ದೈವ ಪರಿಚಾರಕರ ಜೀವನ ಭದ್ರತೆಗೆ ಅಗತ್ಯವಾದ ವಿವಿಧ ಯೋಜನೆಗಳನ್ನು ರೂಪಿಸುವ ಉದ್ದೇಶದಿಂದ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀ ನಾರಾಯಣ ಎಂ. ಅವರ ನೇತೃತ್ವದಲ್ಲಿ ಹಾಗೂ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಮಾಲಾಡಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

WhatsApp Image 2026-10-04 at 2.35.16 PM.jpeg

ಕಾರ್ಯಕ್ರಮದ ಅಂಗವಾಗಿ ಟ್ರಸ್ಟ್ ಸದಸ್ಯರ ಮಕ್ಕಳಿಗೆ 2025–26ನೇ ಸಾಲಿನ ಶೈಕ್ಷಣಿಕ ಸಾಧನೆಗಾಗಿ ಪ್ರತಿಭಾ ಪುರಸ್ಕಾರ ನೀಡಲಾಗುವುದು.

ಇದರ ಪೂರ್ವಭಾವಿಯಾಗಿ ಅ.4ರಂದು ಕಾವೂರು ಸೊಸೈಟಿ ಸಭಾಂಗಣದಲ್ಲಿ ಅಂಚೆ ಇಲಾಖೆಯ ಸಹಯೋಗದಲ್ಲಿ ವಿಮಾ ಯೋಜನೆ ಕುರಿತು ಮಾಹಿತಿ ಕಾರ್ಯಕ್ರಮ ಹಾಗೂ ಎ.ಜೆ. ಆಸ್ಪತ್ರೆಯ ಸಹಕಾರದಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ವಿಜಯ್ ಚೌಟ ಬಜ್ಪೆ, ಕೋಶಾಧಿಕಾರಿ ಜಿತೇಶ್, ಕಾರ್ಯದರ್ಶಿ ಸುದರ್ಶನ್, ಉದಯ ಪೂಜಾರಿ, ಉಪ ಕಾರ್ಯದರ್ಶಿ ದಿನೇಶ್ ಕಕ್ಕ್ಯಪದವು, ಸಲಹೆಗಾರ ಹರ್ಷಿತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

WhatsApp Image 2026-10-04 at 2.35.16 PM (1).jpeg