Skip to content
Tulunadu Special

ವಿಶ್ವ ತುಳುವೆರ್ (ರಿ) ಕೇರಳ ಘಟಕಕ್ಕೆ ಅದ್ದೂರಿ ಚಾಲನೆ; ಸಂಸ್ಕೃತಿ ಸಂಭ್ರಮದಲ್ಲಿ ಪದಾಧಿಕಾರಿಗಳ ಪದಗ್ರಹಣ

ಕಾಸರಗೋಡು, ಆ. 2: ವಿಶ್ವ ತುಳುವೆರ್ (ರಿ) ಕೇರಳ ಘಟಕದ ಉದ್ಘಾಟನಾ ಸಮಾರಂಭ, ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಡಾ. ವಾಣಿಶ್ರೀ ಕಾಸರಗೋಡು ಅವರ ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ), ಕಾಸರಗೋಡು ಇದರ 236ನೇ ಸಾಹಿತ್ಯ, ಗಾನ ಮತ್ತು ನೃತ್ಯ ವೈಭವ ...

By Billavavani
ವಿಶ್ವ ತುಳುವೆರ್ (ರಿ) ಕೇರಳ ಘಟಕಕ್ಕೆ ಅದ್ದೂರಿ ಚಾಲನೆ; ಸಂಸ್ಕೃತಿ ಸಂಭ್ರಮದಲ್ಲಿ ಪದಾಧಿಕಾರಿಗಳ ಪದಗ್ರಹಣ

ಕಾಸರಗೋಡು, ಆ. 2: ವಿಶ್ವ ತುಳುವೆರ್ (ರಿ) ಕೇರಳ ಘಟಕದ ಉದ್ಘಾಟನಾ ಸಮಾರಂಭ, ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಡಾ. ವಾಣಿಶ್ರೀ ಕಾಸರಗೋಡು ಅವರ ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ), ಕಾಸರಗೋಡು ಇದರ 236ನೇ ಸಾಹಿತ್ಯ, ಗಾನ ಮತ್ತು ನೃತ್ಯ ವೈಭವ ಕಾರ್ಯಕ್ರಮವು ಕಾಸರಗೋಡಿನ ಶ್ರೀಗಿರಿ ಸದನದಲ್ಲಿರುವ "ಪ್ರಕೃತಿ ಆಯುರ್ವೇದ ಆಸ್ಪತ್ರೆ"ಯ ಶಿವದುರ್ಗಾ ಕಲಾ ವೇದಿಕೆಯಲ್ಲಿ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವ ತುಳುವೆರ್ (ರಿ) ಮಂಗಳೂರು ಘಟಕದ ಉಪಾಧ್ಯಕ್ಷ ಡಾ. ಗಣೇಶ್ ಕುಮಾರ್ ವಹಿಸಿ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ವಿಶ್ವ ತುಳುವೆರ್ (ರಿ) ಮಂಗಳೂರು ಸಂಸ್ಥಾಪಕ ಅಧ್ಯಕ್ಷ ದಯಾನಂದ ಮಂಗಳೂರು ಅವರು ತುಳು ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ಉಳಿವಿಗೆ ಎಲ್ಲರೂ ಸಮಾನ ಮನಸ್ಕರಾಗಿ ಶ್ರಮಿಸಬೇಕೆಂದು ಕರೆ ನೀಡಿ, ತುಳು ಭಾಷೆಯ ಉಗಮ ಹಾಗೂ ಲಿಪಿಯ ಇತಿಹಾಸವನ್ನು ವಿವರಿಸಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವಿಶ್ವ ತುಳುವೆರ್ (ರಿ) ಕೇರಳ ಘಟಕದ ಗೌರವಾಧ್ಯಕ್ಷರಾಗಿ ಡಾ. ವೆಂಕಟಗಿರೀಶ್, ಅಧ್ಯಕ್ಷರಾಗಿ ಡಾ. ವಾಣಿಶ್ರೀ ಕಾಸರಗೋಡು, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಉಡುಪಿ, ಉಪಾಧ್ಯಕ್ಷರಾಗಿ ಸೀತಾರಾಮ ಮಲ್ಲ ಹಾಗೂ ಅಚ್ಚುತ ಭಟ್, ಜಂಟಿ ಕಾರ್ಯದರ್ಶಿಗಳಾಗಿ ಜಯಂತಿ ಮತ್ತು ಸೌಮ್ಯ ಮಲ್ಲ, ಸದಸ್ಯರಾಗಿ ರೋಹಿತ್ ಮಲ್ಲ ಅಧಿಕಾರ ಸ್ವೀಕರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ. ವಾಣಿಶ್ರೀ ಕಾಸರಗೋಡು ಅವರ ಸಾರಥ್ಯದಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ 40ಕ್ಕೂ ಅಧಿಕ ಕಲಾವಿದರು ನೃತ್ಯ, ಗಾಯನ ಹಾಗೂ ವೈವಿಧ್ಯಮಯ ಕಲಾಪ್ರದರ್ಶನಗಳನ್ನು ನೀಡಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಇದೇ ಸಂದರ್ಭದಲ್ಲಿ ಸಂಘದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಸುರೇಶ್ ಉಡುಪಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಸಂಘದ ಬಾಲ ಕಲಾವಿದರಾದ ಮೋಕ್ಷ, ಮುಕ್ತಿ ಮತ್ತು ಹರ್ಷಿಶ್ ಅವರ ಜನ್ಮದಿನವನ್ನು ವೇದಿಕೆಯಲ್ಲಿ ವಿಶೇಷವಾಗಿ ಆಚರಿಸಲಾಯಿತು. ಶಿವದುರ್ಗಾ ಕಲಾ ವೇದಿಕೆಯ ವಿನ್ಯಾಸದಲ್ಲಿ ಪ್ರಮುಖ ಪಾತ್ರವಹಿಸಿದ ರತ್ನಾಕರ ಅವರನ್ನು ಗುರುತಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ಕಲಾವಿದರಿಗೂ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ವಿಶ್ವ ತುಳುವೆರ್ (ರಿ) ಮಂಗಳೂರು ಘಟಕದ ಉಪಾಧ್ಯಕ್ಷ ಜಿ.ವಿ.ಎಸ್. ಉಲ್ಲಾಳ್, ಅಧ್ಯಕ್ಷ ಪ್ರಕಾಶ್ ಸಿಂಫೊನಿ, ಸದಸ್ಯರಾದ ಗಣೇಶ್ ಬಲ್ಲಾಳ್ ಬಾಗ್, ರಾಜೇಶ್ ಉಲ್ಲಾಳ್, ಉಮೇಶ್ ಪಟ್ಟಾಜೆ, ಹೇಮಲತಾ ತೊಕ್ಕೊಟ್ಟು, ಸುಮನ, ರೇಖಾ ರೋಶನ್, ಸೀತಾ ಉಡುಪಿ, ಡೊಲ್ಸಿ ಫೆರ್ನಾಂಡಿಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸೀತಾರಾಮ ಮಲ್ಲ ಪ್ರಾರ್ಥನೆ ನೆರವೇರಿಸಿದರು. ವಿಶ್ವನಾಥ ಪುತ್ತಿಗೆ ಅವರ ವಿಶಿಷ್ಟ ಜನ್ಮದಿನ ಗೀತೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಡಾ. ವಾಣಿಶ್ರೀ ಕಾಸರಗೋಡು ಕಾರ್ಯಕ್ರಮವನ್ನು ಸಂಯೋಜಿಸಿ ವಂದನಾರ್ಪಣೆಗೈದರೆ, ಸುರೇಶ್ ಉಡುಪಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.

ಸಾನ್ವಿ ಉಡುಪಿ, ಸೌಮ್ಯ, ಅಮೃತ್, ಐಶ್ವರ್ಯ, ರೋಹಿತ್, ತೇಜಸ್ವಿನಿ, ಮೋಕ್ಷ, ಮುಕ್ತಿ, ಕೃಪಾಶ್ರೀ, ಧನ್ವಿನ್, ಜಾಹ್ನವಿ, ತನ್ವಿಶ್, ಶ್ರೇಯಾ, ಆತ್ಮಿಕ, ಹರ್ಷಿಶ್, ಯಶಸ್ವಿನಿ, ಜಿಯಾನ್, ಸ್ಮಾಹಿ, ಧೀರಜ್, ಸುವಾನ್, ಭವಿತ್, ಹರ್ಷಿತ್, ಲಕ್ಷ್ಮೀಶ್, ಆರಾಧ್ಯ, ಶ್ರೇಯ, ಶ್ರೇಯಸ್, ಲಿಯಾ, ಲಿಶಾ, ರಕ್ಷಿತಾ, ಹಾರ್ದಿಕ್, ಅಜಿತ್ ಸೇರಿದಂತೆ 40ಕ್ಕೂ ಅಧಿಕ ಪ್ರತಿಭಾನ್ವಿತ ಕಲಾವಿದರು ತಮ್ಮ ಅದ್ಭುತ ಕಲಾಪ್ರದರ್ಶನಗಳ ಮೂಲಕ ತುಳು ಹಾಗೂ ಕನ್ನಡ ಸಂಸ್ಕೃತಿಯ ಪೋಷಣೆಗೆ ಮಹತ್ವದ ಕೊಡುಗೆ ನೀಡಿದರು.

ಈ ಕಾರ್ಯಕ್ರಮವು ವಿಶ್ವ ತುಳುವೆರ್ (ರಿ) ಕೇರಳ ಘಟಕದ ಇತಿಹಾಸದಲ್ಲಿ ಸಾಂಸ್ಕೃತಿಕ ವೈಭವ ಮತ್ತು ಸಂಘಟನಾ ಬಲವನ್ನು ಪ್ರತಿಬಿಂಬಿಸುವ ಅರ್ಥಪೂರ್ಣ ಕಾರ್ಯಕ್ರಮವಾಗಿ ಮೂಡಿಬಂದಿತು.