Skip to content
Billava News

ಯುವವಾಹಿನಿ ಕೊಲ್ಯ ಘಟಕದಿಂದ 30 ದಿನಗಳ ಬ್ರೈಡಲ್ ಮೇಕಪ್ ತರಬೇತಿ ಯಶಸ್ವಿ ಸಮಾರೋಪ

ಯುವವಾಹಿನಿ (ರಿ) ಕೊಲ್ಯ ಘಟಕ, ಸಿಡಾಕ್ ಮಂಗಳೂರು ಹಾಗೂ ಭಾರತೀಯ ವಿಕಾಸ ಟ್ರಸ್ಟ್ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ 30 ದಿನಗಳ ಬ್ರೈಡಲ್ ಮೇಕಪ್ ತರಬೇತಿಯ ಸಮಾರೋಪ ಸಮಾರಂಭವು ಅಕ್ಟೋಬರ್ 28, 2026ರಂದು ಗೋರಿಗುಡ್ಡೆಯ KSTA ಸಭಾಂಗಣದಲ್ಲಿ ನಡೆಯಿತು.

By Billavavani
ಯುವವಾಹಿನಿ ಕೊಲ್ಯ ಘಟಕದಿಂದ 30 ದಿನಗಳ ಬ್ರೈಡಲ್ ಮೇಕಪ್ ತರಬೇತಿ ಯಶಸ್ವಿ ಸಮಾರೋಪ

ಗೋರಿಗುಡ್ಡೆ: ಯುವವಾಹಿನಿ (ರಿ) ಕೊಲ್ಯ ಘಟಕ, ಸಿಡಾಕ್ ಮಂಗಳೂರು ಹಾಗೂ ಭಾರತೀಯ ವಿಕಾಸ ಟ್ರಸ್ಟ್ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ 30 ದಿನಗಳ ಬ್ರೈಡಲ್ ಮೇಕಪ್ ತರಬೇತಿಯ ಸಮಾರೋಪ ಸಮಾರಂಭವು ಅಕ್ಟೋಬರ್ 28, 2026ರಂದು ಗೋರಿಗುಡ್ಡೆಯ KSTA ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯುವವಾಹಿನಿ (ರಿ) ಕೊಲ್ಯ ಘಟಕದ ಅಧ್ಯಕ್ಷ ಜೀವನ್ ಕೊಲ್ಯ ಮಾತನಾಡಿ, ಬ್ರೈಡಲ್ ಮೇಕಪ್ ಕ್ಷೇತ್ರದಲ್ಲಿ ಉತ್ತಮ ಬೇಡಿಕೆಯಿದ್ದು, ಸೂಕ್ತ ತರಬೇತಿ ಪಡೆದು ಮಹಿಳೆಯರು ಸ್ವಂತ ಉದ್ಯೋಗ ಆರಂಭಿಸುವ ಮೂಲಕ ಸ್ವಾವಲಂಬಿ ಜೀವನ ನಡೆಸಬಹುದು ಎಂದರು.

1001217964.jpg

ತರಬೇತಿಯ ಸಂಪನ್ಮೂಲ ವ್ಯಕ್ತಿ ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷೆ ವಿದ್ಯಾ ರಾಕೇಶ್ ಮಾತನಾಡಿ, ಕಲಿತ ವಿದ್ಯೆಯನ್ನು ನಿರಂತರ ಅಭ್ಯಾಸದ ಮೂಲಕ ಮತ್ತಷ್ಟು ಅಭಿವೃದ್ಧಿಪಡಿಸಿಕೊಂಡು, ಸ್ವಂತ ಉದ್ಯಮ ಸ್ಥಾಪಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಇತರರಿಗೂ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

1001217965.jpg

ಯುವವಾಹಿನಿ ಕೇಂದ್ರ ಸಮಿತಿಯ ಮಹಿಳಾ ಸಂಘಟನಾ ನಿರ್ದೇಶಕಿ ಸುಧಾ ಸುರೇಶ್ ಅವರು ತರಬೇತಿ ಪಡೆದ ಮಹಿಳೆಯರ ಪ್ರಯತ್ನವನ್ನು ಶ್ಲಾಘಿಸಿ, ಲಭ್ಯವಾಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸುವಂತೆ ಕರೆ ನೀಡಿದರು.

1001217966.jpg

ಕಾರ್ಯಕ್ರಮದಲ್ಲಿ KSTA ರಾಜ್ಯ ಕೋಶಾಧಿಕಾರಿ ಪ್ರಜ್ವಲ್ ಕುಮಾರ್, ವಲಯ ಅಧ್ಯಕ್ಷ ಹರೀಶ್ ಹಾಗೂ CIDOK ಸಂಸ್ಥೆಯ ತರಬೇತುದಾರರಾದ ಪ್ರತ್ಯುಷ ಮತ್ತು ದೀಪ ಉಪಸ್ಥಿತರಿದ್ದರು.

ತರಬೇತಿ ಪೂರ್ಣಗೊಳಿಸಿದ ಮಹಿಳೆಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು, ತರಬೇತಿಗೆ ಅವಕಾಶ ಕಲ್ಪಿಸಿದ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದರು. ಒಟ್ಟು ಸುಮಾರು 35 ಮಹಿಳೆಯರು ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಪ್ರಮಾಣಪತ್ರಗಳನ್ನು ಸ್ವೀಕರಿಸಿದರು.

ಮಹಿಳೆಯರಲ್ಲಿ ವೃತ್ತಿಪರ ಕೌಶಲ್ಯ ಬೆಳೆಸಿ, ಸ್ವಯಂ ಉದ್ಯೋಗದ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಲು ಈ ತರಬೇತಿ ಸಹಕಾರಿಯಾಯಿತು.