Skip to content
Billava News

ಬಹ್ರೇನ್: ಯಕ್ಷಗಾನ ಕಲಾವಿದ ರವಿ ಕುಮಾರ್ ಮುಂಡಾಜೆ ಅವರಿಗೆ ‘ಜಿ.ಎಸ್.ಎಸ್. ಬಹ್ರೇನ್ ಬಿಲ್ಲವಾಸ್’ ವತಿಯಿಂದ ಸಾದರ ಸನ್ಮಾನ

ಬಹ್ರೇನ್: ಯಕ್ಷಗಾನ ಕಲಾಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆ ಹಾಗೂ ನಿರಂತರ ಸೇವೆಯನ್ನು ಗುರುತಿಸಿ, ಖ್ಯಾತ ಯಕ್ಷಗಾನ ಕಲಾವಿದರಾದ ಶ್ರೀ ರವಿ ಕುಮಾರ್ ಮುಂಡಾಜೆ ಅವರನ್ನು ‘ಜಿ.ಎಸ್.ಎಸ್. ಬಹ್ರೇನ್ ಬಿಲ್ಲವಾಸ್’ ವತಿಯಿಂದ ಸಾದರವಾಗಿ ಸನ್ಮಾನಿಸಲಾಯಿತು.

By Billavavani

ಯಕ್ಷರಂಗದಲ್ಲಿ ತಮ್ಮ ವಿಶಿಷ್ಟ ಕಲಾ ಪ್ರತಿಭೆ, ಬದ್ಧತೆ ಹಾಗೂ ನಿರಂತರ ಸೇವೆಯ ಮೂಲಕ ಗಮನ ಸೆಳೆದಿರುವ ರವಿ ಕುಮಾರ್ ಮುಂಡಾಜೆ ಅವರ ಕಲಾ ಸಾಧನೆಯನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಸನ್ಮಾನವನ್ನು ಸ್ವೀಕರಿಸಿದ ರವಿ ಕುಮಾರ್ ಮುಂಡಾಜೆ ಅವರಿಗೆ ಸಂಘದ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಅಭಿನಂದನೆಗಳನ್ನು ಸಲ್ಲಿಸಿದರು. ಅವರ ಕಲಾ ಪಯಣವು ಇದೇ ರೀತಿ ಯಶಸ್ವಿಯಾಗಿ ಮುಂದುವರಿಯಲಿ, ಅವರಿಗೆ ಆಯುಷ್ಯ, ಆರೋಗ್ಯ, ಶ್ರೇಯಸ್ಸು ಹಾಗೂ ಇನ್ನಷ್ಟು ಕಲಾ ಸಾಧನೆ ದೊರೆಯಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜಿ.ಎಸ್.ಎಸ್. ಬಹ್ರೇನ್ ಬಿಲ್ಲವಾಸ್ ಅಧ್ಯಕ್ಷರು ರಾಜ್ ಸುವರ್ಣ ಹಾಗೂ ಕಾರ್ಯಕಾರಿ ಸಮಿತಿ (2026–27) ಕುಲದೀಪಾ ಅಮೀನ್, ಸುರೇಶ್ ಪೂಜಾರಿ, ಸತೀಶ್ ಪೂಜಾರಿ, ರಿತೇಶ್ ಪೂಜಾರಿ, ರೋಷನ್ ಕರ್ಕೇರ, ಸುಜನ್ ಬಂಗೇರ, ರೂಪೇಶ್ ಪೂಜಾರಿ, ಅಜೀತ್ ಬಂಗೇರ, ಹರೀಶ್ ಪೂಜಾರಿ, ಸೀತಾರಾಮ್ ಸುವರ್ಣ, ದಿಲೀಪ್ ಪೂಜಾರಿ, ರಚನ್ ಪೂಜಾರಿ, ರಕ್ಷಿತ್ ಪೂಜಾರಿ, ಭೋಜ ಅಂಚನ್, ಸಂಪತ್ ಸುವರ್ಣ, ಹೇಮಂತ್ ಸಾಲ್ಯಾನ್, ಹರಿನಾಥ್ ಸುವರ್ಣ, ದಿನೇಶ್ ಕರ್ಕೇರ, ಸಚಿನ್ ಪೂಜಾರಿ, ರೋಹಿತ್ ಪೂಜಾರಿ, ಶ್ವೇತಾ ಸುಧೀಶ್ ಸಾಲಿಯನ್, ವಿದ್ಯಾ ಪುರುಷೋತಮ್ ಪೂಜಾರಿ ಉಪಸ್ಥಿತರಿದ್ದರು.