Skip to content
Billava News

ಯೂತ್ ಬಿಲ್ಲವ (ರಿ.) ಕಾರ್ಕಳ: ಸೆ. 27ರಂದು ‘ಬಿರ್ವೆರೆ ಕೆಸರ್ದ ಗೊಬ್ಬು-2026’ ಮತ್ತು ‘ಬಿರ್ದುದ ಬಿರ್ವೆರೆ ಗರ್ದ್‌ದ ಗೊಬ್ಬು’ ಕಾರ್ಯಕ್ರಮ

ಕಾರ್ಕಳ: ಯೂತ್ ಬಿಲ್ಲವ (ರಿ.) ಕಾರ್ಕಳದ ನೇತೃತ್ವದಲ್ಲಿ ಹಾಗೂ ಕಾರ್ಕಳ ವಿಧಾನಸಭಾ ವ್ಯಾಪ್ತಿಯ ವಿವಿಧ ಬಿಲ್ಲವ ಸಂಘಗಳ ಸಹಯೋಗದಲ್ಲಿ ‘ಬಿರ್ವೆರೆ ಕೆಸರ್ದ ಗೊಬ್ಬು-2026’ ಮತ್ತು ‘ಬಿರ್ದುದ ಬಿರ್ವೆರೆ ಗರ್ದ್‌ದ ಗೊಬ್ಬು’ ಕಾರ್ಯಕ್ರಮ ಸೆ. 27ರಂದು ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ನಡೆಯಲಿದೆ.

By Billavavani

ಕಾರ್ಕಳ–ಹೆಬ್ರಿ ತಾಲೂಕುಗಳ ಬಿಲ್ಲವ ಸಮಾಜ ಬಾಂಧವರಿಗಾಗಿ ಆಯೋಜಿಸಿರುವ ಕಾರ್ಯಕ್ರಮದ ಸಭಾ ಕಾರ್ಯಕ್ರಮ ಬೆಳಿಗ್ಗೆ 8 ಗಂಟೆಗೆ ನಡೆಯಲಿದ್ದು, ಬೆಳಿಗ್ಗೆ 9 ಗಂಟೆಯಿಂದ ವಿವಿಧ ಗ್ರಾಮೀಣ ಕ್ರೀಡಾಕೂಟಗಳು ಆರಂಭವಾಗಲಿವೆ.

ಪುರುಷರ ವಿಭಾಗದಲ್ಲಿ ಕೆಸರುಗದ್ದೆ ಓಟ, 9 ಜನರ ತಂಡದ ಹಗ್ಗಜಗ್ಗಾಟ, 6 ಜನರ ತಂಡದ ವಾಲಿಬಾಲ್, ನಿಧಿ ಶೋಧ, ಮೂರು ಕಾಲಿನ ಓಟ ಹಾಗೂ ಮಡಕೆ ಒಡೆಯುವ ಸ್ಪರ್ಧೆಗಳು ನಡೆಯಲಿವೆ. ಮಹಿಳೆಯರಿಗಾಗಿ ಕೆಸರುಗದ್ದೆ ಓಟ, 9 ಜನರ ತಂಡದ ಹಗ್ಗಜಗ್ಗಾಟ, 7 ಜನರ ತಂಡದ ತ್ರೋಬಾಲ್, ನಿಧಿ ಶೋಧ, ನೀರಿನ ಕೊಡಪಾನ ಓಟ, ಲಿಂಬೆ ಓಟ ಹಾಗೂ ಮಡಕೆ ಒಡೆಯುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಮಕ್ಕಳ ವಿಭಾಗದಲ್ಲಿ ಕೆಸರುಗದ್ದೆ ಓಟ, ನಿಧಿ ಶೋಧ, ಹಾಳೆ ಎಳೆಯುವುದು ಹಾಗೂ ಲಿಂಬೆ ಓಟ ಸ್ಪರ್ಧೆಗಳು ನಡೆಯಲಿವೆ.

ಗ್ರಾಮೀಣ ಕ್ರೀಡೆಗಳ ಮೂಲಕ ಬಿಲ್ಲವ ಸಮಾಜದ ಬಾಂಧವರನ್ನು ಒಂದೆಡೆ ಸೇರಿಸಿ, ಪರಸ್ಪರ ಸ್ನೇಹ, ಸೌಹಾರ್ದತೆ ಹಾಗೂ ಒಗ್ಗಟ್ಟನ್ನು ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಗಳೊಂದಿಗೆ ಯುವಕರು, ಮಹಿಳೆಯರು ಮತ್ತು ಮಕ್ಕಳಿಗೂ ಮುಕ್ತವಾಗಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಕಾರ್ಕಳ–ಹೆಬ್ರಿ ತಾಲೂಕುಗಳ ಬಿಲ್ಲವ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.