Skip to content
Billava News

ಯುವವಾಹಿನಿ (ರಿ.) ಬಜಪೆ: ಸಂಪರ್ಕದ ನೆಲೆಯಲ್ಲಿ ಪರಸ್ಪರ ಬಾಂಧವ್ಯ ಗಟ್ಟಿಗೊಳಿಸಿದ ಧಾರ್ಮಿಕ ಕ್ಷೇತ್ರಗಳ ಯಾತ್ರೆ

ಬಜಪೆ: ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ಸದಸ್ಯರ ನಡುವೆ ಪರಸ್ಪರ ಬಾಂಧವ್ಯ ಹಾಗೂ ಸಂಪರ್ಕವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ನವೆಂಬರ್ 27ರಂದು ಒಂದು ದಿನದ ಧಾರ್ಮಿಕ ಪುಣ್ಯಕ್ಷೇತ್ರಗಳ ಯಾತ್ರೆಯನ್ನು ಆಯೋಜಿಸಲಾಯಿತು.

By Billavavani
ಯುವವಾಹಿನಿ (ರಿ.) ಬಜಪೆ: ಸಂಪರ್ಕದ ನೆಲೆಯಲ್ಲಿ ಪರಸ್ಪರ ಬಾಂಧವ್ಯ ಗಟ್ಟಿಗೊಳಿಸಿದ ಧಾರ್ಮಿಕ ಕ್ಷೇತ್ರಗಳ ಯಾತ್ರೆ

ಬಜಪೆ: ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ಸದಸ್ಯರ ನಡುವೆ ಪರಸ್ಪರ ಬಾಂಧವ್ಯ ಹಾಗೂ ಸಂಪರ್ಕವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ನವೆಂಬರ್ 27ರಂದು ಒಂದು ದಿನದ ಧಾರ್ಮಿಕ ಪುಣ್ಯಕ್ಷೇತ್ರಗಳ ಯಾತ್ರೆಯನ್ನು ಆಯೋಜಿಸಲಾಯಿತು.

ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನ, ಶ್ರೀ ಮದನಂತೇಶ್ವರ ವಿನಾಯಕ ದೇವಸ್ಥಾನ ಮಧೂರು, ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮಡಾಯಿ ಶ್ರೀ ತಿರುವರುಕಾಟ್ಟು ಕಾವ್ ಭಗವತಿ ದೇವಸ್ಥಾನ ಹಾಗೂ ಪರಸ್ಸಿನಿ ಮಡಪುರ ಶ್ರೀ ಮುತ್ತಪ್ಪನ್ ದೇವಸ್ಥಾನಗಳಿಗೆ ಭಕ್ತಿಪೂರ್ವಕವಾಗಿ ಭೇಟಿ ನೀಡಲಾಯಿತು.

1001256376.jpg

ಬೆಳಿಗ್ಗೆ 5 ಗಂಟೆಗೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ, ಬಜಪೆಯಿಂದ ಯಾತ್ರೆ ಆರಂಭಗೊಂಡಿತು. ಮೊದಲಿಗೆ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಬೆಳಗಿನ ನಿತ್ಯಪೂಜೆಯಲ್ಲಿ ಪಾಲ್ಗೊಂಡ ಸದಸ್ಯರು, ಬಳಿಕ ಮಧೂರು ಶ್ರೀ ವಿನಾಯಕ ದೇವಸ್ಥಾನ ಹಾಗೂ ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.

1001256378.jpg

ನಂತರ ಶ್ರೀ ತಿರುವರುಕಾಟ್ಟು ಕಾವ್ ಭಗವತಿ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಅನ್ನಪ್ರಸಾದ ಸ್ವೀಕರಿಸಿದರು. ಬಳಿಕ ಪರಸ್ಸಿನಿ ಮಡಪುರ ಶ್ರೀ ಮುತ್ತಪ್ಪನ್ ದೇವಸ್ಥಾನದಲ್ಲಿ ದೇವರ ದರ್ಶನದೊಂದಿಗೆ ನೇಮೋತ್ಸವವನ್ನು ವೀಕ್ಷಿಸಿ ಭಕ್ತಿಭಾವದಲ್ಲಿ ಮಿಂದೆದ್ದರು. ಅಲ್ಲಿನ ದೋಣಿ ವಿಹಾರದಲ್ಲಿ ಪಾಲ್ಗೊಂಡು ಸದಸ್ಯರು ಸಂತೋಷದ ಕ್ಷಣಗಳನ್ನು ಪರಸ್ಪರ ಹಂಚಿಕೊಂಡರು. ಸಂಜೆ 7 ಗಂಟೆಗೆ ಯಾತ್ರಾರ್ಥಿಗಳು ಬಜಪೆಯತ್ತ ಪ್ರಯಾಣ ಬೆಳೆಸಿದರು.

1001256377.jpg

ಈ ಯಾತ್ರೆಯಲ್ಲಿ ಒಟ್ಟು 53 ಮಂದಿ ಪಾಲ್ಗೊಂಡಿದ್ದರು. ಪರಸ್ಪರ ಸಹಕಾರ, ಸೌಹಾರ್ದತೆ ಹಾಗೂ ಸದಸ್ಯರ ಉತ್ಸಾಹ ಯಾತ್ರೆಗೆ ವಿಶೇಷ ಮೆರುಗು ನೀಡಿತು. ಆಧ್ಯಾತ್ಮಿಕ ಅನುಭವದೊಂದಿಗೆ ಸಂತೋಷದ ಕ್ಷಣಗಳನ್ನು ಹಂಚಿಕೊಂಡ ಈ ಯಾತ್ರೆಯು ಸದಸ್ಯರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವುದರ ಜೊತೆಗೆ ಸಂಪರ್ಕದ ಕೊಂಡಿಯನ್ನು ಮತ್ತಷ್ಟು ಬಲಪಡಿಸುವಲ್ಲಿ ಯಶಸ್ವಿಯಾಯಿತು.

1001256380.jpg

ಯಾತ್ರೆಯ ಸಂಚಾಲಕತ್ವವನ್ನು ವಿನೀತ್ ಪೂಜಾರಿ ವಹಿಸಿಕೊಂಡಿದ್ದರು. ಯುವವಾಹಿನಿ ಬಜಪೆ ಘಟಕದ ಅಧ್ಯಕ್ಷ ರೋಹಿತ್ ಪೂಜಾರಿ, ಮಾಜಿ ಅಧ್ಯಕ್ಷರು, ಘಟಕದ ಸದಸ್ಯರು ಹಾಗೂ ಇತರ ಸಮಾಜದ ಸದಸ್ಯರು ಭಾಗವಹಿಸಿದ್ದರು. ಯಾತ್ರೆಯು ಯಶಸ್ವಿಯಾಗಿ ಸಂಪನ್ನಗೊಂಡಿತು.