Skip to content
Billava News

ಗುರುಗಳ ಪ್ರತಿಷ್ಠಾ ವರ್ಧಂತ್ಯುತ್ಸವದ ಪ್ರಯುಕ್ತ ಯುವವಾಹಿನಿ ಬಜಪೆ ಘಟಕದಿಂದ ಸ್ವಯಂಸೇವಾ ಕಾರ್ಯ

ಬಜಪೆ: ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಬಿಂಬ ಪ್ರತಿಷ್ಠಾ ವರ್ಧಂತ್ಯುತ್ಸವದ ಪ್ರಯುಕ್ತ ನವೆಂಬರ್ 8, 2026ರಂದು ಬಜಪೆಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಯುವವಾಹಿನಿ (ರಿ.) ಬಜಪೆ ಘಟಕದ...

By Billavavani
ಗುರುಗಳ ಪ್ರತಿಷ್ಠಾ ವರ್ಧಂತ್ಯುತ್ಸವದ ಪ್ರಯುಕ್ತ ಯುವವಾಹಿನಿ ಬಜಪೆ ಘಟಕದಿಂದ ಸ್ವಯಂಸೇವಾ ಕಾರ್ಯ

ಬಜಪೆ: ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಬಿಂಬ ಪ್ರತಿಷ್ಠಾ ವರ್ಧಂತ್ಯುತ್ಸವದ ಪ್ರಯುಕ್ತ ನವೆಂಬರ್ 8, 2026ರಂದು ಬಜಪೆಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಯುವವಾಹಿನಿ (ರಿ.) ಬಜಪೆ ಘಟಕದ ಸದಸ್ಯರು ಹಾಗೂ ಗುರು ಮಂದಿರದ ಸದಸ್ಯರು ಸೇವಾಭಾವದಿಂದ ಸ್ವಯಂಸೇವಾ ಕಾರ್ಯದಲ್ಲಿ ಪಾಲ್ಗೊಂಡರು.

ವರ್ಧಂತ್ಯುತ್ಸವದ ಅಂಗವಾಗಿ ಗುರುದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಬಜಪೆ ವ್ಯಾಪ್ತಿಯ ವಿವಿಧ ಭಜನಾ ತಂಡಗಳಿಂದ ನಿರಂತರ ಭಜನಾ ಸಂಕೀರ್ತನೆ ಭಕ್ತಿಭಾವದಿಂದ ನೆರವೇರಿತು.

ಮಧ್ಯಾಹ್ನ ನಡೆದ ಅನ್ನಪ್ರಸಾದ ಸೇವೆ ಹಾಗೂ ಭಜನಾ ತಂಡದವರಿಗೆ ನಿರಂತರವಾಗಿ ಚಹಾ ಮತ್ತು ಫಲಾಹಾರ ವಿತರಿಸುವ ಸೇವೆಯಲ್ಲಿ ಯುವವಾಹಿನಿ ಘಟಕದ ಸದಸ್ಯರು ಉತ್ಸಾಹದಿಂದ ಕೈಜೋಡಿಸಿದರು.

ಗುರುದೇವರ ಆರಾಧನೆಯೊಂದಿಗೆ ಸೇವೆಯನ್ನೂ ಭಕ್ತಿಯ ಭಾಗವಾಗಿಸಿಕೊಂಡ ಸದಸ್ಯರು, ತಮ್ಮ ನಿಸ್ವಾರ್ಥ ಸೇವೆಯ ಮೂಲಕ ಗುರುದೇವರ ಕೃಪೆಗೆ ಪಾತ್ರರಾದರು. ಕಾರ್ಯಕ್ರಮದಲ್ಲಿ ಸ್ವಯಂಸೇವಕರಾಗಿ ಸಹಕರಿಸಿದ ಎಲ್ಲರ ಸೇವಾಭಾವನೆ ಮೆಚ್ಚುಗೆಗೆ ಪಾತ್ರವಾಯಿತು.