Skip to content
Billava News

ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಯುವವಾಹಿನಿ ಬಜಪೆ ಘಟಕಕ್ಕೆ ದ್ವಿತೀಯ ಬಹುಮಾನ

ಬಜಪೆ: ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನ, ಕಿನ್ನಿಪದವು, ಬಜಪೆ ಇಲ್ಲಿ ದಿನಾಂಕ 01.11.2026ರಂದು ನಡೆದ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಯುವವಾಹಿನಿ (ರಿ.) ಬಜಪೆ ಘಟಕದ ಮಹಿಳಾ ತಂಡವು ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದೆ.

By Billavavani

ಗುರುಕುಲ ಬಾಲ ಸಂಸ್ಕಾರ ಕೇಂದ್ರ, ಕಿನ್ನಿಪದವು ಇದರ ಚತುರ್ಥ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಶನಿಮಹಾತ್ಮೆ ತಾಳಮದ್ದಳೆ, ಶ್ರೀ ಶನೈಶ್ವರ ಪೂಜೆ ಹಾಗೂ ವಾರ್ಷಿಕ ಕ್ರೀಡಾಕೂಟವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ನಡೆದ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಯುವವಾಹಿನಿ ಬಜಪೆ ಘಟಕದ ಮಹಿಳಾ ತಂಡವು ಉತ್ಸಾಹ ಹಾಗೂ ಸಂಘಟಿತ ಪ್ರಯತ್ನದೊಂದಿಗೆ ಸ್ಪರ್ಧಿಸಿ ದ್ವಿತೀಯ ಸ್ಥಾನವನ್ನು ಪಡೆದು ಘಟಕಕ್ಕೆ ಹೆಮ್ಮೆ ತಂದಿದೆ.

22.jpeg

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀ ಲೋಕೇಶ್ ಪೂಜಾರಿ ಹಾಗೂ ಪಟ್ಟಣ ಪಂಚಾಯತ್ ಕೌನ್ಸಿಲರ್ ಶ್ರೀ ಪದ್ಮನಾಭ ಪೂಜಾರಿ ಅವರು ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು.

ಯುವವಾಹಿನಿ ಬಜಪೆ ಘಟಕದ ಮಹಿಳಾ ಸದಸ್ಯರಾದ ಶ್ರೀಮತಿ ಸುಚಿತ ದೇವರಾಜ್, ಡಾ. ಶಿಲ್ಪಾ ದಿನೇಶ್, ಶ್ರೀಮತಿ ಉಷಾ ಸುವರ್ಣ, ಕುಮಾರಿ ಜೀವಿತ, ಶ್ರೀಮತಿ ಸೌಮ್ಯ ರಮೇಶ್, ಶ್ರೀಮತಿ ದೇವಿಕಾ ನಿತಿನ್ ಹಾಗೂ ಶ್ರೀಮತಿ ಚಿತ್ರ ಅವರು ಸ್ಪರ್ಧೆಯಲ್ಲಿ ಭಾಗವಹಿಸಿ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು.

12.jpeg

ತಂಡದ ಈ ಸಾಧನೆಗೆ ಯುವವಾಹಿನಿ (ರಿ.) ಬಜಪೆ ಘಟಕದ ಅಧ್ಯಕ್ಷರಾದ ಶ್ರೀ ರೋಹಿತ್ ಪೂಜಾರಿ ಅವರು ಘಟಕದ ಸರ್ವ ಸದಸ್ಯರ ಪರವಾಗಿ ಭಾಗವಹಿಸಿದ ಎಲ್ಲಾ ಮಹಿಳಾ ಸದಸ್ಯರನ್ನು ಅಭಿನಂದಿಸಿ ಶುಭ ಹಾರೈಸಿದರು.