Skip to content
Billava News

ಯುವವಾಹಿನಿ ಬೆಂಗಳೂರು ಘಟಕದ ಸದಸ್ಯ ಶಶಿಧರ್ ಕೋಟ್ಯಾನ್ ಅವರಿಗೆ ಡಾಕ್ಟರೇಟ್ ಪದವಿ

ಬೆಂಗಳೂರು: ಯುವವಾಹಿನಿ (ರಿ.) ಬೆಂಗಳೂರು ಘಟಕದ ಸದಸ್ಯರಾದ ಶಶಿಧರ್ ಕೋಟ್ಯಾನ್ ಅವರು ಪಿಎಚ್.ಡಿ. ಸಂಶೋಧನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.

By Billavavani

ಬೆಂಗಳೂರಿನ ರೇವಾ ವಿಶ್ವವಿದ್ಯಾಲಯದ (REVA University) ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಇವರು ತಮ್ಮ ಸಂಶೋಧನೆಯನ್ನು ಪೂರ್ಣಗೊಳಿಸಿದ್ದಾರೆ. “Development and Performance Evaluation of Near-Nano Structured WC-Co Cutting Inserts with Novel TiAlSiN Coating for Machining Inconel 718” ಎಂಬ ವಿಷಯದ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿ ಈ ಶೈಕ್ಷಣಿಕ ಗೌರವವನ್ನು ಪಡೆದಿದ್ದಾರೆ.

1001235727.jpg

ಕೈಗಾರಿಕಾ ಕ್ಷೇತ್ರದಲ್ಲಿ ಸುಮಾರು 20 ವರ್ಷಗಳ ಅನುಭವ ಹೊಂದಿರುವ ಶಶಿಧರ್ ಕೋಟ್ಯಾನ್ ಅವರು, ತಮ್ಮ ವೃತ್ತಿಜೀವನದ ಜವಾಬ್ದಾರಿಗಳ ನಡುವೆಯೂ ಉನ್ನತ ಶಿಕ್ಷಣ ಮತ್ತು ಸಂಶೋಧನೆಯತ್ತ ಆಸಕ್ತಿ ವಹಿಸಿದ್ದರು. ಸತತ ಐದು ವರ್ಷಗಳ ಪರಿಶ್ರಮ, ತಾಳ್ಮೆ ಹಾಗೂ ಬದ್ಧತೆಯಿಂದ ಸಂಶೋಧನೆಯನ್ನು ಪೂರ್ಣಗೊಳಿಸಿರುವುದು ವಿಶೇಷ ಸಾಧನೆಯಾಗಿದೆ.

ವೃತ್ತಿಜೀವನ, ಶೈಕ್ಷಣಿಕ ಸಾಧನೆ ಹಾಗೂ ಸಾಮಾಜಿಕ ಸೇವೆಯನ್ನು ಸಮತೋಲನದಿಂದ ಮುನ್ನಡೆಸುತ್ತಿರುವ ಇವರ ಸಾಧನೆಯು ಯುವವಾಹಿನಿ ಸಂಘಟನೆಯ ಸದಸ್ಯರು ಸೇರಿದಂತೆ ಯುವಜನತೆಗೆ ಪ್ರೇರಣೆಯಾಗಿದೆ.

ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡುವಂತಾಗಲಿ...