ಯುವವಾಹಿನಿ (ರಿ.) ಬೆಂಗಳೂರು ಘಟಕದ ವಿಶೇಷ ಮಹಾಸಭೆ ಯಶಸ್ವಿ
ಬೆಂಗಳೂರು, ಆ. 2: ಯುವವಾಹಿನಿ (ರಿ.) ಬೆಂಗಳೂರು ಘಟಕದ ವಿಶೇಷ ಮಹಾಸಭೆಯು ಆಗಸ್ಟ್ 2ರಂದು ವಿಜಯನಗರದ ಹೊಸಹಳ್ಳಿಯ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಯಶಸ್ವಿಯಾಗಿ ನಡೆಯಿತು.

ಬೆಂಗಳೂರು, ಆ. 2: ಯುವವಾಹಿನಿ (ರಿ.) ಬೆಂಗಳೂರು ಘಟಕದ ವಿಶೇಷ ಮಹಾಸಭೆಯು ಆಗಸ್ಟ್ 2ರಂದು ವಿಜಯನಗರದ ಹೊಸಹಳ್ಳಿಯ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಯಶಸ್ವಿಯಾಗಿ ನಡೆಯಿತು.
ಘಟಕದ ಅಧ್ಯಕ್ಷರಾದ ಶ್ರೀ ವಿಜೇತ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಶ್ರೀ ಜಯಂತ ಸಾಲ್ಯಾನ್ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಶ್ರೀ ವಿಕೇಶ್ ಕೋಟ್ಯಾನ್ ಅವರು ಸ್ವಾಗತ ಭಾಷಣ ಮಾಡಿ ಸಭೆಗೆ ಆಗಮಿಸಿದ ಎಲ್ಲರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಸಭೆಯಲ್ಲಿ ಯುವವಾಹಿನಿಯ ಬೈಲಾ ತಿದ್ದುಪಡಿ ಕುರಿತು ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿ ವಿಸ್ತೃತ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಸದಸ್ಯರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಕೇಂದ್ರ ಸಮಿತಿಗೆ ಸಲ್ಲಿಸಲಾಗುವುದು ಎಂದು ಅಧ್ಯಕ್ಷರು ಭರವಸೆ ನೀಡಿದರು.
ಅಧ್ಯಕ್ಷರಾದ ಶ್ರೀ ವಿಜೇತ್ ಪೂಜಾರಿ ಅವರು ಅಕ್ಟೋಬರ್ 4ರಂದು ಯುವವಾಹಿನಿ ಬೆಂಗಳೂರು ಘಟಕದ ವತಿಯಿಂದ ನಡೆಯಲಿರುವ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ, ಕಾರ್ಯಕ್ರಮದ ಯಶಸ್ಸಿಗೆ ಎಲ್ಲ ಸದಸ್ಯರ ಸಹಕಾರ ಕೋರಿದರು.
ಸಭೆಯಲ್ಲಿ ಕಾರ್ಯದರ್ಶಿ ಶ್ರೀ ಮನೋಜ್ ಕುಮಾರ್ ಟಿ., ಪ್ರಥಮ ಉಪಾಧ್ಯಕ್ಷ ಶ್ರೀ ಕಿಶೋರ್, ದ್ವಿತೀಯ ಉಪಾಧ್ಯಕ್ಷ ಶ್ರೀ ಸಚಿಂದ್ರ ಕೋಟ್ಯಾನ್, ಕೋಶಾಧಿಕಾರಿ ಶ್ರೀಮತಿ ಶ್ರುತಿ, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಶ್ರೀಮತಿ ಚಿತ್ರ ಡಿ.ಪಿ. ಅವರು ಅಚ್ಚುಕಟ್ಟಾಗಿ ನಿರೂಪಿಸಿದರು. ಕೊನೆಯಲ್ಲಿ ಕಾರ್ಯದರ್ಶಿ ಶ್ರೀ ಮನೋಜ್ ಕುಮಾರ್ ಟಿ. ಅವರು ಧನ್ಯವಾದ ಸಮರ್ಪಿಸಿದರು. ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರ ಸಹಕಾರದೊಂದಿಗೆ ಸಭೆಯು ಶಿಸ್ತುಬದ್ಧವಾಗಿ ನಡೆಯಿತು. ರಾಷ್ಟ್ರಗೀತೆಯೊಂದಿಗೆ ವಿಶೇಷ ಮಹಾಸಭೆ ಸಮಾಪ್ತಿಗೊಂಡಿತು.
