ತುಳುವೆರೆ ಚಾವಡಿ ಆಯೋಜಿಸಿದ 28ನೇ ವರ್ಷದ ‘ಪರ್ಬದ ಲೇಸ್’: ಮನಗೆದ್ದ ಯುವವಾಹಿನಿ ಬೆಂಗಳೂರು ಘಟಕದ ಕುಣಿತ ಭಜನೆ
ಬೆಂಗಳೂರು: ತುಳುವೆರೆ ಚಾವಡಿ (ರಿ.), ಬೆಂಗಳೂರು ಇವರ ಆಶ್ರಯದಲ್ಲಿ ನಡೆದ 28ನೇ ವರ್ಷದ ‘ಪರ್ಬದ ಲೇಸ್’ ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಬೆಂಗಳೂರು ಘಟಕದ ಕುಣಿತ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡು ಸಭಿಕರ ಮನಗೆದ್ದವು.

ಬೆಂಗಳೂರು: ತುಳುವೆರೆ ಚಾವಡಿ (ರಿ.), ಬೆಂಗಳೂರು ಇವರ ಆಶ್ರಯದಲ್ಲಿ ನಡೆದ 28ನೇ ವರ್ಷದ ‘ಪರ್ಬದ ಲೇಸ್’ ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಬೆಂಗಳೂರು ಘಟಕದ ಕುಣಿತ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡು ಸಭಿಕರ ಮನಗೆದ್ದವು.
ಕಾರ್ಯಕ್ರಮದಲ್ಲಿ ಯುವವಾಹಿನಿಯ ಕುಣಿತ ಭಜನೆ ತಂಡದ ಮನಮೋಹಕ ಪ್ರದರ್ಶನದೊಂದಿಗೆ ವಿವಿಧ ಸಾಂಸ್ಕೃತಿಕ ನೃತ್ಯಗಳು ವಿಶೇಷ ಮೆಚ್ಚುಗೆಗೆ ಪಾತ್ರವಾದವು. ಇದೇ ಸಂದರ್ಭದಲ್ಲಿ ಯುವವಾಹಿನಿಯ ಸದಸ್ಯೆ ರಂಜಿತಾ ಅವರ ಪುತ್ರಿಯ ಭರತನಾಟ್ಯ ಪ್ರದರ್ಶನವೂ ಪ್ರೇಕ್ಷಕರಿಂದ ಪ್ರಶಂಸೆಗೆ ಪಾತ್ರವಾಯಿತು. ಸಂಘಟನಾ ಕಾರ್ಯದರ್ಶಿ ಅಕ್ಷತಾ ಸುಧೀರ್ ಅವರು ಸಲ್ಲಿಸಿದ ಪ್ರಾರ್ಥನೆ ಕಾರ್ಯಕ್ರಮದ ವೈಭವವನ್ನು ಮತ್ತಷ್ಟು ಹೆಚ್ಚಿಸಿತು.
ಯುವವಾಹಿನಿಯ ಕುಣಿತ ಭಜನೆ ಹಾಗೂ ಸಾಂಸ್ಕೃತಿಕ ನೃತ್ಯ ಪ್ರದರ್ಶನಗಳಿಗೆ ಸಭಿಕರು, ಗಣ್ಯರು ಮತ್ತು ಆಯೋಜಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಯಿತು. ಕಾರ್ಯಕ್ರಮದ ಬಳಿಕ ಅನೇಕ ಅತಿಥಿಗಳು ತಂಡವನ್ನು ಅಭಿನಂದಿಸಿ, “ಬೆಂಗಳೂರುದಲ್ಲೇ ಇಂತಹ ಅದ್ಭುತ ಕುಣಿತ ಭಜನೆ ತಂಡವಿರುವುದು ಹೆಮ್ಮೆಯ ಸಂಗತಿ” ಎಂದು ಪ್ರಶಂಸಿಸಿದರು.
ಈ ಯಶಸ್ಸಿನ ಹಿಂದೆ ಶ್ರಮಿಸಿದ ಸುಮಾರು 30ಕ್ಕೂ ಹೆಚ್ಚು ಸದಸ್ಯರು, ಕಲಾವಿದರು, ತರಬೇತುದಾರರು ಹಾಗೂ ಸಹಕರಿಸಿದ ಪ್ರತಿಯೊಬ್ಬರಿಗೂ ಯುವವಾಹಿನಿ ಬೆಂಗಳೂರು ಘಟಕ ಕೃತಜ್ಞತೆ ಸಲ್ಲಿಸಿದೆ. ಕಾರ್ಯಕ್ರಮಕ್ಕೆ ಆಗಮಿಸಿ ತಂಡಕ್ಕೆ ಪ್ರೋತ್ಸಾಹ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಲಾಯಿತು.
ಯುವವಾಹಿನಿಯ ಕುಣಿತ ಭಜನಾ ತಂಡವು ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ದೀಕ್ಷಾ ಕೋಟ್ಯಾನ್ ಅವರ ಮಾರ್ಗದರ್ಶನ ಮತ್ತು ತರಬೇತಿಯಲ್ಲಿ ದೂರದೂರಿನಿಂದ ಆಗಮಿಸಿದ ಸದಸ್ಯರ ನಿರಂತರ ಅಭ್ಯಾಸದ ಫಲವಾಗಿ ಅತ್ಯುತ್ತಮ ಪ್ರದರ್ಶನ ನೀಡಿತು. ಹಾಗೆಯೇ ಸಾಂಸ್ಕೃತಿಕ ನಿರ್ದೇಶಕರಾದ ಸೃಜನ್ ಪೂಜಾರಿ ಅವರ ನೇತೃತ್ವದಲ್ಲಿ ತಂಡ ನೀಡಿದ ನೃತ್ಯ ಪ್ರದರ್ಶನವೂ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಗಳಿಸಿತು.
ಸದಸ್ಯರ ಉತ್ಸಾಹ, ಶಿಸ್ತು, ಕಲೆಯ ಮೇಲಿನ ಸಮರ್ಪಣೆ ಹಾಗೂ ಸಂಘಟನೆಯ ಮೇಲಿನ ಬದ್ಧತೆಯೇ ಈ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ಘಟಕದ ಪ್ರತಿಯೊಬ್ಬ ಸದಸ್ಯರ ಪರಿಶ್ರಮದಿಂದ ಇಂದು ಯುವವಾಹಿನಿ ಬೆಂಗಳೂರು ಘಟಕದ ಹೆಸರು ರಾಜ್ಯದ ವಿವಿಧ ಭಾಗಗಳಲ್ಲಿ ಗುರುತಿಸಿಕೊಂಡು ಪ್ರಶಂಸೆಗೆ ಪಾತ್ರವಾಗುತ್ತಿದೆ.
