ಅಯ್ಯಪ್ಪ ಭಜನಾ ಮಂದಿರದಲ್ಲಿ ಭಜನಾ ಸೇವೆ ಸಲ್ಲಿಸಿದ ಯುವವಾಹಿನಿ ಕೊಲ್ಯ ಘಟಕ
ಅಯ್ಯಪ್ಪ ಭಜನಾ ಮಂದಿರ, ದೇರಳಕಟ್ಟೆ ಇಲ್ಲಿ ನಡೆಯುತ್ತಿರುವ 48 ದಿನಗಳ ಅಖಂಡ ಭಜನಾ ಸೇವೆಯ ಅಂಗವಾಗಿ ನವೆಂಬರ್ 28, 2026ರ ಶನಿವಾರದಂದು ಯುವವಾಹಿನಿ (ರಿ.) ಕೊಲ್ಯ ಘಟಕದ ವತಿಯಿಂದ ಭಜನಾ ಸೇವೆ ನಡೆಯಿತು.

ದೇರಳಕಟ್ಟೆ: ಅಯ್ಯಪ್ಪ ಭಜನಾ ಮಂದಿರ, ದೇರಳಕಟ್ಟೆ ಇಲ್ಲಿ ನಡೆಯುತ್ತಿರುವ 48 ದಿನಗಳ ಅಖಂಡ ಭಜನಾ ಸೇವೆಯ ಅಂಗವಾಗಿ ನವೆಂಬರ್ 28, 2026ರ ಶನಿವಾರದಂದು ಯುವವಾಹಿನಿ (ರಿ.) ಕೊಲ್ಯ ಘಟಕದ ವತಿಯಿಂದ ಭಜನಾ ಸೇವೆ ನಡೆಯಿತು.
ಘಟಕದ ಅಧ್ಯಕ್ಷರಾದ ಜೀವನ್ ಕೊಲ್ಯ ಹಾಗೂ ಸದಸ್ಯರು ದೀಪ ಪ್ರಜ್ವಲಿಸುವ ಮೂಲಕ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಸುಮಾರು ಒಂದೂವರೆ ಗಂಟೆಗಳ ಕಾಲ ದೇವರ ನಾಮಸ್ಮರಣೆ ಹಾಗೂ ಭಕ್ತಿಗೀತೆಗಳ ಗಾಯನದ ಮೂಲಕ ಸದಸ್ಯರು ಭಕ್ತಿಭಾವದಿಂದ ಭಜನಾ ಸೇವೆ ಸಲ್ಲಿಸಿದರು. ಅವರ ಭಕ್ತಿಗೀತೆಗಳು ನೆರೆದಿದ್ದ ಭಕ್ತರನ್ನು ಭಕ್ತಿಸಾಗರದಲ್ಲಿ ತೇಲುವಂತೆ ಮಾಡಿತು.

ಘಟಕದ ಆಂತರಿಕ ಲೆಕ್ಕ ಪರಿಶೋಧನಾ ನಿರ್ದೇಶಕರಾದ ಜಗಜೀವನ್ ಕೊಲ್ಯ ಅವರ ನೇತೃತ್ವದಲ್ಲಿ ಸದಸ್ಯರು ಭಜನಾ ಸೇವೆಯಲ್ಲಿ ಪಾಲ್ಗೊಂಡು ಭಗವಂತನನ್ನು ಸ್ತುತಿಸಿದರು.

ಈ ಸಂದರ್ಭದಲ್ಲಿ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷರು ಹಾಗೂ ಸದಸ್ಯರು ಯುವವಾಹಿನಿ ಕೊಲ್ಯ ಘಟಕದ ಭಜನಾ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
