Skip to content
Billava News

ಯುವವಾಹಿನಿ (ರಿ.) ಬೆಂಗಳೂರು ಘಟಕ: ವಿಜೃಂಭಣೆಯಿಂದ ನೆರವೇರಿದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ

ಬೆಂಗಳೂರು, ಸೆ. 20: ಯುವವಾಹಿನಿ (ರಿ.) ಬೆಂಗಳೂರು ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮವು ಸೆಪ್ಟೆಂಬರ್ 20, 2026ರ ಭಾನುವಾರದಂದು ಹೊಸಹಳ್ಳಿ, ವಿಜಯನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ನೆರವೇರಿತು.

By Billavavani
ಯುವವಾಹಿನಿ (ರಿ.) ಬೆಂಗಳೂರು ಘಟಕ: ವಿಜೃಂಭಣೆಯಿಂದ ನೆರವೇರಿದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ

ಬೆಂಗಳೂರು, ಸೆ. 20: ಯುವವಾಹಿನಿ (ರಿ.) ಬೆಂಗಳೂರು ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮವು ಸೆಪ್ಟೆಂಬರ್ 20, 2026ರ ಭಾನುವಾರದಂದು ಹೊಸಹಳ್ಳಿ, ವಿಜಯನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ನೆರವೇರಿತು.

WhatsApp Image 2026-09-22 at 3.17.01 PM.jpeg

ಘಟಕದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಂಕಲ್ಪದೊಂದಿಗೆ ಪುತ್ತೂರಿನಿಂದ ಆಗಮಿಸಿದ್ದ ಶ್ರೀ ಹರೀಶ ಶಾಂತಿ ಪುತ್ತೂರು ಅವರ ನೇತೃತ್ವದಲ್ಲಿ ಗುರುಪೂಜೆ ನೆರವೇರಿತು. ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿ ಹಾಗೂ ಕಾರ್ಯಕ್ರಮದ ಉದ್ಘಾಟಕರಾದ ಶ್ರೀ ಗೋವಿಂದ ಬಾಬು ಪೂಜಾರಿ ಅವರನ್ನು ಪೂರ್ಣಕುಂಭ ಕಲಶ ಮತ್ತು ಕುಣಿತ ಭಜನೆಯ ಮೆರವಣಿಗೆಯೊಂದಿಗೆ ಭವ್ಯವಾಗಿ ಸ್ವಾಗತಿಸಲಾಯಿತು.

WhatsApp Image 2026-09-22 at 3.17.07 PM (1).jpeg

ಈ ಸಂದರ್ಭದಲ್ಲಿ ಘಟಕದ ಕುಣಿತ ಭಜನಾ ತಂಡದ ಸದಸ್ಯರು ಸುಮಾರು 20 ನಿಮಿಷಗಳ ಕಾಲ ಭಕ್ತಿಭಾವಪೂರ್ಣ ಕುಣಿತ ಭಜನೆ ಪ್ರದರ್ಶಿಸಿದರು. ನಂತರ ಮಹಾಪೂಜೆ ನಡೆಯಿತು.

WhatsApp Image 2026-09-22 at 3.17.07 PM.jpeg

ಕು. ವರ್ಷಿತಾ ಅವರ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಯಿತು. ಘಟಕದ ಅಧ್ಯಕ್ಷರಾದ ವಿಜೇತ್ ವಿ. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿ, ಉದ್ಘಾಟಕ ಶ್ರೀ ಗೋವಿಂದ ಬಾಬು ಪೂಜಾರಿ, ಮುಖ್ಯ ಅತಿಥಿಗಳಾದ ಪ್ರಸನ್ನ ಪೂಜಾರಿ, ಚಲನಚಿತ್ರ ನಿರ್ದೇಶಕ ಸ್ಮಿತೇಶ್ ಬಾರ್ಯಾ, ಯುವ ವಾಗ್ಮಿ ಚಂದ್ರಹಾಸ ಬಳಂಜ, ಯುವವಾಹಿನಿ (ರಿ.) ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್ ಕಲ್ಲಾಜೆ, ಘಟಕದ ಕಾರ್ಯದರ್ಶಿ ಮನೋಜ್ ಕುಮಾರ್ ಟಿ., ನಾರಾಯಣಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ದೇವಿ ಪ್ರಸಾದ್ ಹಾಗೂ ಶ್ರೀಮತಿ ದೀಕ್ಷಾ ಕೋಟ್ಯಾನ್ ಉಪಸ್ಥಿತರಿದ್ದರು.

ಘಟಕದ ಅಧ್ಯಕ್ಷರು ಅತಿಥಿಗಳನ್ನು ಶಾಲು ಹಾಗೂ ಪುಷ್ಪ ನೀಡಿ ಸ್ವಾಗತಿಸಿದರು. ದೀಪ ಬೆಳಗಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು. ಕು. ನಿರೀಕ್ಷಾ ಸ್ವಾಗತಿಸಿದರು. ಶ್ರೀಮತಿ ದೀಕ್ಷಾ ಕೋಟ್ಯಾನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

WhatsApp Image 2026-09-22 at 3.17.05 PM (1).jpeg

ಉದ್ಘಾಟಕರಾದ ಶ್ರೀ ಗೋವಿಂದ ಬಾಬು ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಮಗೆ ನೀಡಿದ ಆತ್ಮೀಯ ಸ್ವಾಗತವು ಭಕ್ತಿಭಾವದ ಪ್ರತೀಕವಾಗಿದೆ ಎಂದು ಅಭಿಪ್ರಾಯಪಟ್ಟರು. ಯುವವಾಹಿನಿ (ರಿ.) ಬೆಂಗಳೂರು ಘಟಕದ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮ ಬೆಂಬಲವಿರುವುದಾಗಿ ಭರವಸೆ ನೀಡಿದರು.

WhatsApp Image 2026-09-22 at 3.17.03 PM.jpeg

ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿಯವರು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಸ್ಮರಿಸಿ, ಗುರುಗಳ ಸಂದೇಶದ ಮಹತ್ವವನ್ನು ವಿವರಿಸಿದರು. ಶ್ರೀ ಸ್ಮಿತೇಶ್ ಬಾರ್ಯಾ ಅವರು ಗುರುಸಂದೇಶದ ಕುರಿತು ಸುದೀರ್ಘ ಧಾರ್ಮಿಕ ಉಪನ್ಯಾಸ ನೀಡುವುದರ ಜೊತೆಗೆ, ಆಧುನಿಕ ಸಮಾಜದಲ್ಲಿ ನಾರಾಯಣ ಗುರುಗಳ ಸಂದೇಶದ ಪ್ರಸ್ತುತತೆಯನ್ನು ವಿವರಿಸಿದರು. ಶ್ರೀ ಪ್ರಸನ್ನ ಪೂಜಾರಿ ಹಾಗೂ ಶ್ರೀ ಚಂದ್ರಹಾಸ ಬಳಂಜ ಅವರು ತಮ್ಮ ಮಾತಿನ ಮೂಲಕ ಗುರುಗಳನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಶ್ರೀ ಹರೀಶ್ ಶಾಂತಿ ಪುತ್ತೂರು ಸೇರಿದಂತೆ ಅತಿಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಪ್ರೋತ್ಸಾಹಕರನ್ನು ಗೌರವಿಸಲಾಯಿತು. ಘಟಕದ ಅಧ್ಯಕ್ಷರಾದ ವಿಜೇತ್ ವಿ. ಪೂಜಾರಿ ಅಧ್ಯಕ್ಷೀಯ ಭಾಷಣ ಮಾಡಿದರು. ಶ್ರೀಮತಿ ಮಧುಶ್ರೀ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ದೇವಿ ಪ್ರಸಾದ್ ಅವರ ಧನ್ಯವಾದ ಸಮರ್ಪಣೆಯೊಂದಿಗೆ ಸಭಾ ಕಾರ್ಯಕ್ರಮ ಮುಕ್ತಾಯಗೊಂಡಿತು.

WhatsApp Image 2026-09-22 at 3.17.05 PM.jpeg

ಗುರುಪೂಜೆಯ ಅಂಗವಾಗಿ ಮಧ್ಯಾಹ್ನ ಮಹಾ ಮಂಗಳಾರತಿ ನೆರವೇರಿತು. ವೈಯಕ್ತಿಕ ಗುರುಪ್ರಾರ್ಥನೆಯೊಂದಿಗೆ ಬ್ರಹ್ಮಾರ್ಪಣೆ ಹಾಗೂ ಪ್ರಸಾದ ವಿತರಣೆ ನಡೆಯಿತು. ಬಳಿಕ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.

WhatsApp Image 2026-09-22 at 3.16.59 PM.jpeg

ಮಧ್ಯಾಹ್ನದ ವಿರಾಮದ ಬಳಿಕ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಮತ್ತು ಸಂದೇಶವನ್ನು ಆಧರಿಸಿ ಘಟಕದ ಸದಸ್ಯರು ಪ್ರಸ್ತುತಪಡಿಸಿದ ಅರ್ಥಪೂರ್ಣ ಪ್ರಹಸನಗಳು ಸಭಿಕರ ಮೆಚ್ಚುಗೆಗೆ ಪಾತ್ರವಾದವು. ಘಟಕದ ಸದಸ್ಯರಿಗಾಗಿ ಆಯೋಜಿಸಿದ್ದ ಚಿತ್ರಕಲೆ, ಪ್ರಬಂಧ, ಭಾಷಣ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡರು.

ಸ್ಪರ್ಧೆಗಳ ಮೂಲಕ ನಾರಾಯಣ ಗುರುಗಳ ಜೀವನ, ತತ್ವ ಹಾಗೂ ಆದರ್ಶಗಳನ್ನು ಯುವಜನರಿಗೆ ಪರಿಚಯಿಸುವ ಪ್ರಯತ್ನ ನಡೆಯಿತು. ಇದೇ ಸಂದರ್ಭದಲ್ಲಿ ಘಟಕದ ಕುಣಿತ ಭಜನಾ ತಂಡದ ವಿಶೇಷ ನಾಮಫಲಕವನ್ನು ಅತಿಥಿಗಳು ಬಿಡುಗಡೆ ಮಾಡಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ದಿನಪೂರ್ತಿ ನಡೆದ ಕಾರ್ಯಕ್ರಮದಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಸಂಜೆ ಚಹಾ ಮತ್ತು ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

ರಾಷ್ಟ್ರಗೀತೆಯೊಂದಿಗೆ ದಿನಪೂರ್ತಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.

WhatsApp Image 2026-09-22 at 3.17.04 PM.jpegWhatsApp Image 2026-09-22 at 3.17.01 PM (1).jpegWhatsApp Image 2026-09-22 at 3.17.02 PM (1).jpegWhatsApp Image 2026-09-22 at 3.16.59 PM (1).jpegWhatsApp Image 2026-09-22 at 3.17.00 PM (2).jpegWhatsApp Image 2026-09-22 at 3.17.02 PM.jpeg