Skip to content
Billava News

ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಆಚರಣೆ

ಮಂಗಳೂರು, ಸೆ. 4: ಉರ್ವಸ್ಟೋರ್‌ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಸೆ. 1ರಂದು ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಆಚರಣೆ ನಡೆಯಿತು.

By Billavavani
ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಆಚರಣೆ

ಮಂಗಳೂರು, ಸೆ. 4: ಉರ್ವಸ್ಟೋರ್‌ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಸೆ. 1ರಂದು ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಆಚರಣೆ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರಿನ ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕ ಲೋಹಿತ್ ರೆಂಜಳ, ಸಂಘಟನಾ ಕಾರ್ಯದರ್ಶಿ ನಾಗೇಶ್ ಪೂಜಾರಿ ಮಾಣಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕ ಗೋಪಾಲ ಪೂಜಾರಿ ಭಾಗವಹಿಸಿದರು. ಮಂಗಳೂರು ಘಟಕದ ಕಾರ್ಯದರ್ಶಿ ಉಪಾ.ಕೆ ಉಪಸ್ಥಿತರಿದ್ದರು.

1001145362.jpg

ಕಾರ್ಯಕ್ರಮದ ಉದ್ಘಾಟನೆಯನ್ನು ಬಿ.ಇ.ಡಬ್ಲ್ಯು.ಎಸ್. (ರಿ.) ಮಂಗಳೂರು ಸಂಸ್ಥೆಯ ಸಲಹೆಗಾರ ಶ್ರೀಧರ ಪೂಜಾರಿ ಕೂಳೂರು ನೆರವೇರಿಸಿ ಶುಭ ಹಾರೈಸಿದರು. ಶ್ರೀ ನಾರಾಯಣ ಗುರು ಧರ್ಮ ಪ್ರಸರಣ ಸೇವಾ ಟ್ರಸ್ಟ್ (ರಿ.)ಯ ಟ್ರಸ್ಟಿ ವರದರಾಜ್ ಮಟ್ಟು ಕಟಪಾಡಿ ಅವರು ಗುರು ಸಂದೇಶ ನೀಡಿದರು.

1001145359.jpg

ನಾರಾಯಣ ಗುರುಗಳ ಪವಾಡ, ತಪಸ್ಸು, ಸಮಾಜ ಸುಧಾರಣಾ ಕಾರ್ಯಗಳು ಹಾಗೂ ಅದ್ವೈತ ತತ್ವವನ್ನು ವಿವರಿಸಿದ ವರದರಾಜ್ ಮಟ್ಟು ಕಟಪಾಡಿ, “ನನ್ನ ಆತ್ಮ ಮತ್ತು ನಿನ್ನ ಆತ್ಮ ಒಂದೇ” ಎಂಬ ಅದ್ವೈತದ ಮೂಲ ಆಶಯವನ್ನು ಅರಿತುಕೊಳ್ಳಬೇಕು ಎಂದರು. ನಾರಾಯಣ ಗುರುಗಳ ತತ್ವಗಳಾದ ವಿದ್ಯೆ, ಉದ್ಯೋಗ ಮತ್ತು ಸಂಪರ್ಕವನ್ನು ಧ್ಯೇಯವಾಗಿಸಿಕೊಂಡು ಯುವವಾಹಿನಿ ಇನ್ನಷ್ಟು ಉತ್ತಮ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲಿ ಎಂದು ಶುಭ ಹಾರೈಸಿದರು.

ಜಯಂತಿ ಅಂಗವಾಗಿ ಅಷ್ಟೋತ್ತರ ಪಠಣ ಹಾಗೂ ಗುರುಪೂಜೆ ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀ ನಾಗರಾಜ ಹೆಜಮಾಡಿ ವಿರಚಿತ ‘ಶ್ರೀ ನಾರಾಯಣ ಗುರು ಸಚ್ಚರಿತೆ’ ಪಾರಾಯಣ ಗ್ರಂಥವನ್ನು ಬಿಡುಗಡೆ ಮಾಡಲಾಯಿತು.

1001145361.jpg

ರಕ್ಷಾ ಬಂಧನ ಆಚರಣೆ

ನಾರಾಯಣ ಗುರು ಜಯಂತಿಯ ಸಂಭ್ರಮದೊಂದಿಗೆ ರಕ್ಷಾ ಬಂಧನವನ್ನೂ ಆಚರಿಸಲಾಯಿತು. ಯುವವಾಹಿನಿಯ ಮಾಜಿ ಅಧ್ಯಕ್ಷ ನಾಗೇಶ್ ಅಮೀನ್ ಮುಲ್ಲಕಾಡು ಅವರು ರಕ್ಷಾ ಬಂಧನದ ಮಹತ್ವ ಹಾಗೂ ಹಿನ್ನೆಲೆಯನ್ನು ವಿವರಿಸಿದರು. ಬಳಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸದಸ್ಯರು ಪರಸ್ಪರ ರಕ್ಷೆ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸಿದರು. ಶ್ರೀಕಾಂತ್ ಅಂಚನ್ ಹಾಗೂ ಮೋಹನ್ ದಾಸ್ ಮಾಲೆಮಾರ್ ಸಹಕರಿಸಿದರು.

ಭಜನಾ ತಂಡಕ್ಕೆ ಗೌರವ

ಮಾಧವ ಕೀರ್ತನೋತ್ಸವ ಭಜನಾ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಜನಮನ್ನಣೆ ಗಳಿಸಿದ ಯುವವಾಹಿನಿ ಮಂಗಳೂರು ಘಟಕದ ಭಜನಾ ತಂಡವನ್ನು ಗೌರವಿಸಲಾಯಿತು. ತಂಡದ ಸಂಚಾಲಕರೂ, ಮಾಜಿ ಅಧ್ಯಕ್ಷರೂ ಆದ ನಾಗೇಶ್ ಅಮೀನ್ ಮುಲ್ಲಕಾಡು ಹಾಗೂ ಭಜನಾ ತಂಡದ ಸದಸ್ಯರನ್ನು ಸನ್ಮಾನಿಸಲಾಯಿತು.

1001145363.jpg

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಘಟಕದ ಶಿಕ್ಷಕರನ್ನು ಹಾಗೂ ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದ ನಿರ್ದೇಶಕರು ಮತ್ತು ಸಮಿತಿ ಸದಸ್ಯರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ಪ್ರತಿಭಾ ಪುರಸ್ಕಾರ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 92.2 ಅಂಕ ಗಳಿಸಿದ ಜ್ಞಾನ್ ಸಿ. ಕರ್ಕೇರ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 99.17 ಅಂಕ ಗಳಿಸಿದ ದಶಾ ಆರ್.ಪಿ. ಅವರನ್ನು ಪ್ರತಿಭಾ ಪುರಸ್ಕಾರದ ಮೂಲಕ ಸನ್ಮಾನಿಸಲಾಯಿತು. ಇವರು ಘಟಕದ ಸದಸ್ಯರ ಮಕ್ಕಳಾಗಿದ್ದಾರೆ.

1001145366.jpg

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರಿನ ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕ ಲೋಹಿತ್ ರೆಂಜಳ, ಸಂಘಟನಾ ಕಾರ್ಯದರ್ಶಿ ನಾಗೇಶ್ ಪೂಜಾರಿ ಮಾಣಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕ ಗೋಪಾಲ ಪೂಜಾರಿ ಭಾಗವಹಿಸಿ ಶುಭ ಹಾರೈಸಿದರು.

ಕೇಂದ್ರ ಸಮಿತಿಯ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ, ನಿರ್ದೇಶಕರು, ಮಂಗಳೂರು ಘಟಕ ಹಾಗೂ ವಿವಿಧ ಘಟಕಗಳ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಮತ್ತು ಯುವವಾಹಿನಿಯ ಬಂಧುಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕು. ಶಾರಿಕಾ ಬಿ.ಎಚ್. ಉಜ್ಜೋಡಿ ಅವರು ನಾರಾಯಣ ಗುರುಗಳ ದೈವದಶಕಂ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಘಟಕದ ಕಾರ್ಯದರ್ಶಿ ಉಷಾ ಕೆ. ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಡಾ. ರಾಕೇಶ್ ಕುಮಾರ್ ನಿರೂಪಿಸಿದರು. ಉಪಾಧ್ಯಕ್ಷರಾದ ಯತೀಶ್ ಬಳಂಜಾ ಹಾಗೂ ಮಹೇಶ್ ಅಮೀನ್ ಅಭಿನಂದನಾ ಪತ್ರ ವಾಚಿಸಿದರು. ಕೋಶಾಧಿಕಾರಿ ಚಂದ್ರಶೇಖರ್ ಕಿನ್ನಿಗೋಳಿ ವಂದಿಸಿದರು.

ಕಾರ್ಯಕ್ರಮದ ಸಂಯೋಜನೆಗೆ ಸಹಕರಿಸಿದ ಘಟಕದ ಸದಸ್ಯರನ್ನು ಅತಿಥಿಗಳಿಂದ ಗೌರವಿಸಲಾಯಿತು.