Skip to content
Billava News

ಯುವವಾಹಿನಿ (ರಿ.) ಉಡುಪಿ ಘಟಕ: ಗುರು ಸತ್ಸಂಗ: ಗುರು ತತ್ವ–ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ

ಯುವವಾಹಿನಿ (ರಿ.) ಉಡುಪಿ ಘಟಕದ ಆಶ್ರಯದಲ್ಲಿ ಗುರು ಸತ್ಸಂಗ ಕಾರ್ಯಕ್ರಮವು ಸೆ. 24ರಂದು ಗುರುವಾರ ಸಂಜೆ ದಯಾನಂದ ಕರ್ಕೆರ ಅವರ ಮನೆಯಲ್ಲಿ ನಡೆಯಿತು.

By Billavavani
ಯುವವಾಹಿನಿ (ರಿ.) ಉಡುಪಿ ಘಟಕ: ಗುರು ಸತ್ಸಂಗ: ಗುರು ತತ್ವ–ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ

ಉಡುಪಿ, ಸೆ. 27: ಯುವವಾಹಿನಿ (ರಿ.) ಉಡುಪಿ ಘಟಕದ ಆಶ್ರಯದಲ್ಲಿ ಗುರು ಸತ್ಸಂಗ ಕಾರ್ಯಕ್ರಮವು ಸೆ. 24ರಂದು ಗುರುವಾರ ಸಂಜೆ ದಯಾನಂದ ಕರ್ಕೆರ ಅವರ ಮನೆಯಲ್ಲಿ ನಡೆಯಿತು.

ಮನೆಯವರು ಗುರುಗಳಿಗೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಭಜನಾ ಕಾರ್ಯಕ್ರಮ ನಡೆಯಿತು.

ಗುರು ಸಂದೇಶ ನೀಡಿದ ವಿಶ್ರಾಂತ ಪ್ರಾಧ್ಯಾಪಕಿ ಡಾ. ಸುನಿತಾ ವಿ. ಮಾತನಾಡಿ, ಗುರುಗಳ ತತ್ವ–ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ ಭಜನೆಯ ಮೂಲಕ ಎಲ್ಲರೂ ಒಂದಾಗಿ ಸೇರುವ ಅವಕಾಶವನ್ನು ಕಲ್ಪಿಸುವ ಇಂತಹ ಗುರು ಸತ್ಸಂಗ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

Yuvavahini1.jpeg

ಮಾಜಿ ಅಧ್ಯಕ್ಷ ಭಾಸ್ಕರ ಸುವರ್ಣ ಅವರು ಪೂಜೆ ನೆರವೇರಿಸಿ, ಎಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿದರು. ಬಳಿಕ ಮನೆಯವರಿಗೆ ಪ್ರಸಾದ ವಿತರಿಸಲಾಯಿತು. ಗುರು ಸಂದೇಶ ನೀಡಿದ ಡಾ. ಸುನಿತಾ ವಿ. ಅವರನ್ನು ದೇವರ ಪ್ರಸಾದ ಹಾಗೂ ಹೂವಿನ ಗಿಡ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕ ಲೋಹಿತ್ ರೇಂಜಾಲ ಹಾಗೂ ಪ್ರಮುಖರಿಗೆ ಮಾಜಿ ಅಧ್ಯಕ್ಷರಾದ ರಘುನಾಥ್ ಮಾಬಿಯನ್, ಜಗದೀಶ್ ಕುಮಾರ್ ಮತ್ತು ಮಹಾಬಲ ಅಮೀನ್ ಅವರು ಪ್ರಸಾದ ನೀಡಿ ಗೌರವಿಸಿದರು.

‘ಮನೆಗೊಂದು ಮರ, ಊರಿಗೊಂದು ವನ’ ಎಂಬ ಆಶಯದಡಿ ಸಮಾಜ ಸೇವಾ ನಿರ್ದೇಶಕ ಸುಜಿತ್ ಮಟ್ಟು, ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕಿ ಶಾರದಾ ಉಮೇಶ್ ಹಾಗೂ ಪ್ರಚಾರ ನಿರ್ದೇಶಕಿ ಶಕುಂತಲಾ ಸುಕೇಶ್ ಅವರು ಮನೆಯವರಿಗೆ ಮತ್ತು ಗುರು ಸಂದೇಶ ನೀಡಿದ ಅತಿಥಿಗಳಿಗೆ ಗಿಡಗಳನ್ನು ನೀಡಿ ಗೌರವಿಸಿದರು.

Yuvavahini3.jpeg

ಸದಸ್ಯ ಅರವಿಂದ್ ಕೋಟ್ಯಾನ್ ಅವರು ಸ್ವಾಗತಿಸಿದರು. ಘಟಕದ ಅಧ್ಯಕ್ಷ ವಿನೋದ್ ಮಂಚಿ ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಮುಂಬರುವ ಕ್ರೀಡಾಕೂಟ ಸೇರಿದಂತೆ ಇತರ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಕೋರಿದರು. ಕಾರ್ಯದರ್ಶಿ ವೀಕ್ಷಿತ್ ಅವರು ಧನ್ಯವಾದ ಸಲ್ಲಿಸಿದರು.

Yuvavahini.jpeg

ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರು, ಘಟಕದ ಸದಸ್ಯರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು. ಸಮೂಹ ಛಾಯಾಚಿತ್ರದ ಬಳಿಕ ಉಪಹಾರ ಸ್ವೀಕರಿಸುವುದರೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.