Skip to content
Billava News

ಬೆಳ್ಳಾರೆಯಲ್ಲಿ ಯುವವಾಹಿನಿ ಸುಳ್ಯ ಘಟಕದಿಂದ ಆಟಿದ ಕೂಟ

ಬೆಳ್ಳಾರೆ, ಆ. 2: ಯುವವಾಹಿನಿ ರಿ. ಸುಳ್ಯ ಘಟಕದ ವತಿಯಿಂದ ಬೆಳ್ಳಾರೆ ಪೆರುವಾಜೆಯ ಜೆ.ಡಿ. ಆಡಿಟೋರಿಯಂನಲ್ಲಿ ಆಟಿದ ಕೂಟ ಕಾರ್ಯಕ್ರಮ ನಡೆಯಿತು.

By Billavavani
ಬೆಳ್ಳಾರೆಯಲ್ಲಿ ಯುವವಾಹಿನಿ ಸುಳ್ಯ ಘಟಕದಿಂದ ಆಟಿದ ಕೂಟ

ಬೆಳ್ಳಾರೆ, ಆ. 2: ಯುವವಾಹಿನಿ ರಿ. ಸುಳ್ಯ ಘಟಕದ ವತಿಯಿಂದ ಬೆಳ್ಳಾರೆ ಪೆರುವಾಜೆಯ ಜೆ.ಡಿ. ಆಡಿಟೋರಿಯಂನಲ್ಲಿ ಆಟಿದ ಕೂಟ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ರಿ. ಕೇಂದ್ರ ಸಮಿತಿ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್, ಆಟಿ ತಿಂಗಳು ಬಡತನದ ದಿನಗಳ ನೆನಪನ್ನು ಸಂಭ್ರಮಿಸುವ ತಿಂಗಳಾಗಿದ್ದು, ಯುವ ಸಮುದಾಯಕ್ಕೆ ಅದರ ಮಹತ್ವವನ್ನು ಪರಿಚಯಿಸುವ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು.

1001108449.jpg

ಆಟಿ ತಿಂಗಳ ಮಹತ್ವದ ಕುರಿತು ಪ್ರಧಾನ ಉಪನ್ಯಾಸ ನೀಡಿದ ರಾಮಕುಂಜ ಆಂಗ್ಲಮಾಧ್ಯಮ ಪ್ರೌಢಶಾಲೆಯ ಶಿಕ್ಷಕಿ ಸರಿತಾ ಜನಾರ್ಧನ್, ತುಳುನಾಡಿನ ಸಂಪ್ರದಾಯ, ಆಚರಣೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಇಂತಹ ಕಾರ್ಯಕ್ರಮಗಳ ಮೂಲಕ ಜನರಿಗೆ ತಲುಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

1001108448.jpg

ಯುವವಾಹಿನಿ ರಿ. ಸುಳ್ಯ ಘಟಕದ ಅಧ್ಯಕ್ಷ ಮಹೇಶ್ ಕಲ್ಪಣೆ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ ರಿ. ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಕಡಬ ಹಾಗೂ ಬಿಲ್ಲವ ಸಂಘ ರಿ. ಸುಳ್ಯದ ಅಧ್ಯಕ್ಷ ಕೃಷ್ಣ ಕುಮಾರ್ ಅಲೆಕ್ಕಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

1001108450.jpg

ಸಂಸ್ಕೃತಿಕ ವಿಭಾಗದ ಸಂಚಾಲಕ ಪ್ರದೀಪ್ ನೆಟ್ಟಾರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ರಂಜಿತ್ ದರ್ಖಾಸ್ತು ವಂದಿಸಿದರು. ಹರ್ಷಿತಾ ಚೇತನ್ ಕಾರ್ಯಕ್ರಮ ನಿರೂಪಿಸಿದರು.

1001108451.jpg

ಸಭಾ ಕಾರ್ಯಕ್ರಮಕ್ಕೂ ಮುನ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಇದೇ ಸಂದರ್ಭದಲ್ಲಿ ರೇಖಾ ಗೋಪಾಲ್ ಹಾಗೂ ಸರಿತಾ ಜನಾರ್ಧನ್ ಅವರನ್ನು ಯುವವಾಹಿನಿ ಸುಳ್ಯ ಘಟಕದ ವತಿಯಿಂದ ಸನ್ಮಾನಿಸಲಾಯಿತು. ಬಳಿಕ ಆಟಿ ತಿಂಗಳ ಸಾಂಪ್ರದಾಯಿಕ ವಿವಿಧ ಖಾದ್ಯಗಳೊಂದಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.