Skip to content
Billava News

ದಿ. ಪ್ರವೀಣ್ ನೆಟ್ಟಾರು ಅವರಿಗೆ ಯುವವಾಹಿನಿ ಸುಳ್ಯ ಘಟಕದಿಂದ ಗೌರವ ನಮನ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಸುಳ್ಯ ಘಟಕದ ವತಿಯಿಂದ ಘಟಕದ ಪೂರ್ವಾಧ್ಯಕ್ಷರು ಹಾಗೂ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿದ್ದ ದಿವಂಗತ ಪ್ರವೀಣ್ ನೆಟ್ಟಾರು ಅವರ ಸ್ಮರಣಾ ದಿನ...

By Billavavani
ದಿ. ಪ್ರವೀಣ್ ನೆಟ್ಟಾರು ಅವರಿಗೆ ಯುವವಾಹಿನಿ ಸುಳ್ಯ ಘಟಕದಿಂದ ಗೌರವ ನಮನ

ಸುಳ್ಯ, ಜುಲೈ 26: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಸುಳ್ಯ ಘಟಕದ ವತಿಯಿಂದ ಘಟಕದ ಪೂರ್ವಾಧ್ಯಕ್ಷರು ಹಾಗೂ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿದ್ದ ದಿವಂಗತ ಪ್ರವೀಣ್ ನೆಟ್ಟಾರು ಅವರ ಸ್ಮರಣಾ ದಿನವನ್ನು ಭಾನುವಾರ ಬೆಳಿಗ್ಗೆ ನೆಟ್ಟಾರು ನಿವಾಸದಲ್ಲಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವಪೂರ್ವಕವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಸುಳ್ಯ ಘಟಕದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜದ ಗಣ್ಯರು ಮತ್ತು ಬಂಧುಗಳು ಉಪಸ್ಥಿತರಿದ್ದು, ದಿವಂಗತ ಪ್ರವೀಣ್ ನೆಟ್ಟಾರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

12.jpeg1.jpeg