Skip to content
Billava News

ಆಟಿ ಅನಿಷ್ಟವಲ್ಲ ಆತ್ಮಸ್ಟೈರ್ಯ ತುಂಬುವ ಕಾಲ -ಪ್ರೋ! ಭಾಸ್ಕರ್ ರೈ ಕುಕ್ಕುವಲ್ಲಿ

ರಾಜ್ಯೋತ್ಸವದ ಪ್ರಶಸ್ತಿ ವಿಜೇತ ಯುವವಾಹಿನಿ(ರಿ.)ಬಜಪೆ ಘಟಕದ ವತಿಯಿಂದ ಹಾಗೂ ಜಿಲ್ಲಾ ರಾಜ್ಯೋತ್ಸವದ ಪ್ರಶಸ್ತಿ ವಿಜೇತ ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ.) ಬಜಪೆ

By Billavavani
ಆಟಿ ಅನಿಷ್ಟವಲ್ಲ ಆತ್ಮಸ್ಟೈರ್ಯ ತುಂಬುವ ಕಾಲ -ಪ್ರೋ! ಭಾಸ್ಕರ್ ರೈ ಕುಕ್ಕುವಲ್ಲಿ

ಬಜಪೆ : ರಾಜ್ಯೋತ್ಸವದ ಪ್ರಶಸ್ತಿ ವಿಜೇತ ಯುವವಾಹಿನಿ(ರಿ.)ಬಜಪೆ ಘಟಕದ ವತಿಯಿಂದ ಹಾಗೂ ಜಿಲ್ಲಾ ರಾಜ್ಯೋತ್ಸವದ ಪ್ರಶಸ್ತಿ ವಿಜೇತ ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ.) ಬಜಪೆ -ಕರಂಬಾರು ಇವರ ಸಹಕಾರದಲ್ಲಿ "ಆಟಿದ ನೆಂಪು -2026" ಕಾರ್ಯಕ್ರಮವು ಬ್ರಹ್ಮ ಶ್ರೀ ನಾರಾಯಣ ಗುರು ಸಮುದಾಯ ಭವನ ಬಜಪೆ ಇಲ್ಲಿ 19.07.2026 ರಂದು ಯುವವಾಹಿನಿ ಬಜಪೆ ಘಟಕದ ಅಧ್ಯಕ್ಷರಾದ ರೋಹಿತ್ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.

ಊರಿಗೆ ಬಂದ ಮಾರಿ ರೋಗದ ಕಳೆರುಜಿನದ ಕೊಳೆಯ ಕಳೆಯುತ್ತಾ ಮನೆಯಂಗಳಕ್ಕೆ ಆಗಮಿಸಿದ ಆಟಿಕಳೆoಜನಿಗೆ ಮಂಗಳೂರು ಮಹಾನಗರ ಪಾಲಿಕೆಯ ನಿ. ಪೂ. ಪ್ರತಿಪಕ್ಷ ನಾಯಕರಾದ ಅನಿಲ್ ಕುಮಾರ್ ಇವರು ಪಡಿಯಕ್ಕಿಯ ಸುರಿಯುವುದರ ಮೂಲಕ ಆಟಿದ ನೆಂಪು ಕಾರ್ಯಕ್ರಮದ ಉದ್ಘಾಟನೆಯನ್ನು ವಿಭಿನ್ನವಾಗಿ ನಡೆಸಿ ಮಾತಾನಾಡುತ್ತ ಯುವವಾಹಿನಿ ಬಜಪೆ ಘಟಕವು ಹಿಂದಿನ ಸಂಪ್ರದಾಯವನ್ನು ಪುನಃ ಮರುಕಲಿಸುದಕ್ಕೆ ಸ್ಲಾಂಘನೆ ವ್ಯಕ್ತಪಡಿಸಿದರು.

WhatsApp Image 2026-07-20 at 5.05.15 AM (1).jpeg

ಆಟಿ ತಿಂಗಳು ಅನಿಷ್ಟ ಅಲ್ಲ ಆತ್ಮ ಸ್ಟೈರ್ಯಾ ತುಂಬುವ ಕಾಲ. ಆಷಾಡ ಮಾಸದಲ್ಲಿ ಪ್ರಕೃತಿ ದತ್ತ ಆಹಾರವೇ ಔಷಧಿಯಾಗಿ ನಮ್ಮನ್ನು ಕಾಪಾಡುತ್ತೆ. ಆಟಿ ಅಮವಾಸೆಯಂದು ಕುಡಿಯುವ ಪಾಲೇ ಕೆತ್ತೆಯಲ್ಲಿ ಸಾವಿರ ರೋಗವನ್ನು ನಿವಾರಿಸುವ ಶಕ್ತಿ ಇದೆ ಎಂದು ಆಟಿಯ ವಿಶೇಷತೆಯ ಬಗ್ಗೆ ತಮ್ಮ ಉಪನ್ಯಾಸದ ಮಾತಿನಲ್ಲಿ ಕರ್ನಾಟಕ ಜಾನಪದ ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರು ಹಾಗೂ ಸಾಹಿತ್ಯ -ಸಾಂಸ್ಕೃತಿಕ ಚಿಂತಕರಾದ ಪ್ರೋ! ಭಾಸ್ಕರ್ ರೈ ಕುಕ್ಕುವಲ್ಲಿ ಹೇಳಿದರು.

WhatsApp Image 2026-07-20 at 5.03.27 AM.jpeg

ಯುವವಾಹಿನಿಯು ವಿದ್ಯೆಗೆ ಮೊದಲ ಆದ್ಯತೆಯನ್ನು ನೀಡಿದ್ದು ಪ್ರತಿ ವರುಷದಂತೆ ಈ ವರುಷವು ಕೂಡ ಅರ್ಹ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಬಡ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಿ ಗೌರವಿಸಲಾಯಿತು . ಈ ವಿದ್ಯಾರ್ಥಿಗಳ ಹೆಸರನ್ನು ವಿದ್ಯಾನಿಧಿ ನಿರ್ದೇಶಕಿಯಾದ ಡಾ. ಶಿಲ್ಪಾ ದಿನೇಶ್ ಸಭೆಯ ಮುಂದಿಟ್ಟರು.

ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಪವರ್ ಲಿಫ್ಟಿಂಗ್ ಕ್ರೀಡಾ ಸಾಧಕಿ ಶ್ರೀಮತಿ ಅಕ್ಷತಾ ಬೋಲಾ ಇವರ ಸಾಧನೆಯನ್ನು ಗುರುತಿಸಿ ಯುವವಾಹಿನಿ ಬಜಪೆ ಘಟಕದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಇವರ ಸನ್ಮಾನ ಪತ್ರವನ್ನು ಶ್ರೀಮತಿ ದಿವ್ಯ ಸುನಿಲ್ ಸಭೆಯ ಮುಂದಿಟ್ಟರು ಹಾಗೂ ಪುಟ್ಬಾಲ್ ಪಂದ್ಯಾಟದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯುತ್ತಿರುವ ಕುಮಾರಿ ಸಾನ್ವಿ ಎಸ್. ಪೂಜಾರಿ ಬಜಪೆ ಮತ್ತು ಯುವವಾಹಿನಿ ಬಜಪೆ ಘಟಕದ ನಿ.ಪೂ. ಅಧ್ಯಕ್ಷರಾದ ಶ್ರೀಮತಿ ರೇಣುಕಾ ಶೇಖರ್ ಇವರನ್ನು ಗೌರವಿಸಿ ಅಭಿನಂದಿಸಲಾಯಿತು.ಬಿಲ್ಲವ ಸಂಘದ ಗೌರವ ಅಧ್ಯಕ್ಷರಾದ ಎಲ್. ವಿ. ಅಮೀನ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಮಾಹಿತಿ ಹಕ್ಕುಗಳ ಸಮಿತಿಗೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಘಟಕದ ಸ್ಥಾಪಕ ಅಧ್ಯಕ್ಷರು ಅದ ವಿನೋದರ ಪೂಜಾರಿ ಇವರನ್ನು ಗೌರವಿಸಲಾಯಿತು.

WhatsApp Image 2026-07-20 at 5.08.09 AM.jpeg

ಯುವವಾಹಿನಿ ಕೇಂದ್ರ ಸಮಿತಿಯ ಕೋಶಾಧಿಕಾರಿ ಸತೀಶ್ ಕಿಲ್ಪಾಡಿ, ಕೃಷಿಕರಾದ ಮೋಹನ್ ಪೂಜಾರಿ ಕಬೆತ್ತಿಗುತ್ತು, ಬಿಲ್ಲವ ಸಂಘ ಬಜಪೆಯ ಅಧ್ಯಕ್ಷರಾದ ಶಿವರಾಮ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.nದೇವರಾಜ್ ಅಮೀನ್ ನಿರೂಪಿಸಿ, ಸಾನ್ವಿ ರಾಜೇಶ್ ಸಂದ್ಯಾ ಸುನಿಲ್, ಶರ್ಮಿಳಾ ಚಂದ್ರಶೇಖರ ಪ್ರಾರ್ಥಿಸಿ, ಶ್ರೀಮತಿ ವಿಜಯ ಗೋಪಾಲ್ ಸ್ವಾಗತಿಸಿ ಶ್ರೀಮತಿ ಸುಚಿತ ದೇವರಾಜ್ ಧನ್ಯವಾದಗೈದರು.

ಸಭೆಯ ನಂತರ ಕುಟುಂಬ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರ ಜಾನಪದ ನೃತ್ಯ ಹಾಗೂ "ಬಿಡಿದ ಪೊಂಜೊವು " ಕಿರು ನಾಟಕ ಮನರಂಜಿಯವಾಗಿ ನಡೆಯಿತು.ಆಟಿಯ ವಿಶೇಷತೆಯ

ಪತ್ರಡ್ಡೆ,.ಮೆಂತೆ ಗಂಜಿ,ಸೇಮೆ ಅಡ್ಡೆ,ಕುಕ್ಕುದ ಚಟ್ನಿ,ತಿಮರೇ ಚಟ್ನಿ,ಕುಡುತ್ತ ಚಟ್ನಿ,ನುಂಗೆಲ್ ಮೀನು ಚಟ್ನಿ, ಪುನರ ಪುಲಿ ಚಟ್ನಿ,ಕನಿಲೆ ಪದೆಂಗಿ ಗಸಿ,ತೋಜಂಕ್ ಬೊಲೆ ಸುಕ್ಕ,ಉಪ್ಪಡ್ ಪಚ್ಚಿರ್ ಕಡ್ಲೆ ಸುಕ್ಕ,ಅನ್ನ,ಸಾರು,ಕೋಳಿ ಸಾರು,ಪಾಯಸ ಹೀಗೆ ಬಗೆ ಬಗೆಯ ಆಟಿಯ ತಿಂಡಿ ತಿನಿಸುಗಳನ್ನು ಎಲ್ಲರೂ ಸವಿಉಂಡು ಖುಷಿಯ ಅಭಿಪ್ರಾಯ ವ್ಯಕ್ತಪಡಿಸಿದರು.