ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.), ಉಡುಪಿ: ರಾಜ್ಯ ಮಟ್ಟದ ಆನ್‌ಲೈನ್ ಭಾಷಣ ಸ್ಪರ್ಧೆಗೆ ಆಹ್ವಾನ
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.), ಉಡುಪಿ ಇದರ ನೇತೃತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ಜಯಂತಿಯ ಅಂಗವಾಗಿ ರಾಜ್ಯ ಮಟ್ಟದ ಆನ್‌ಲೈನ್ ಕನ್ನಡ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಉಡುಪಿ, ಜುಲೈ 20: ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.), ಉಡುಪಿ ಇದರ ನೇತೃತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ಜಯಂತಿಯ ಅಂಗವಾಗಿ ರಾಜ್ಯ ಮಟ್ಟದ ಆನ್‌ಲೈನ್ ಕನ್ನಡ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸ್ಪರ್ಧೆಯು ಎರಡು ವಿಭಾಗಗಳಲ್ಲಿ ನಡೆಯಲಿದ್ದು, ಪದವಿ ಪೂರ್ವ (PUC) ಹಾಗೂ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಬಹುದು.

ಸ್ಪರ್ಧೆಯ ವಿಷಯ "ನಾರಾಯಣ ಗುರುಗಳ ಜೀವನ ಮತ್ತು ತತ್ವಾದರ್ಶಗಳು ಭಾರತೀಯ ಸಮಾಜಕ್ಕೆ ದಿಕ್ಸೂಚಿ" ಆಗಿದೆ.
ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ಘೋಷಿಸಲಾಗಿದ್ದು, ಪ್ರಥಮ ಬಹುಮಾನ ₹15,000 ಹಾಗೂ ಶಾಶ್ವತ ಫಲಕ, ದ್ವಿತೀಯ ಬಹುಮಾನ ₹10,000 ಹಾಗೂ ಶಾಶ್ವತ ಫಲಕ, ತೃತೀಯ ಬಹುಮಾನ ₹5,000 ಹಾಗೂ ಶಾಶ್ವತ ಫಲಕ ನೀಡಲಾಗುತ್ತದೆ.
ಪ್ರತಿ ವಿಭಾಗದಿಂದ ಅತ್ಯುತ್ತಮ 10 ಸ್ಪರ್ಧಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಸ್ಪರ್ಧಿಗಳಿಗೆ 2026ರ ಆಗಸ್ಟ್ 30ರಂದು (ಭಾನುವಾರ) ಬೆಳಿಗ್ಗೆ 9.00 ಗಂಟೆಯಿಂದ ಉಡುಪಿಯ ಬನ್ನಂಜೆಯಲ್ಲಿರುವ ಬಿಲ್ಲವರ ಸೇವಾ ಸಂಘ (ರಿ.) ಸಭಾಂಗಣದಲ್ಲಿ ನೇರ ಭಾಷಣ ಸ್ಪರ್ಧೆ ನಡೆಯಲಿದೆ.
ವಿಡಿಯೋ ಸಲ್ಲಿಕೆಗೆ ಜುಲೈ 25ರಿಂದ ಅವಕಾಶವಿದ್ದು, ಆಗಸ್ಟ್ 10 ಕೊನೆಯ ದಿನಾಂಕವಾಗಿದೆ. ಭಾಷಣವು ಕನ್ನಡದಲ್ಲಿದ್ದು, ನಿಗದಿತ ವಿಷಯಕ್ಕೆ ಸಂಬಂಧಿಸಿರಬೇಕು. ಅವಧಿ 3ರಿಂದ 4 ನಿಮಿಷಗಳೊಳಗಿರಬೇಕು. ವಿಡಿಯೋವನ್ನು ಯಾವುದೇ ಎಡಿಟಿಂಗ್ ಇಲ್ಲದೆ ಸಿಂಗಲ್ ಟೆಕ್‌ನಲ್ಲಿ, ಲ್ಯಾಂಡ್‌ಸ್ಕೇಪ್ (ಅಡ್ಡ) ಮಾದರಿಯಲ್ಲಿ HD ಅಥವಾ Full HD ಗುಣಮಟ್ಟದಲ್ಲಿ ಚಿತ್ರೀಕರಿಸುವುದು ಕಡ್ಡಾಯವಾಗಿದೆ. ಸ್ಪರ್ಧಿಯು ಭಾಷಣದ ಆರಂಭದಲ್ಲಿ ತನ್ನ ಹೆಸರು, ತರಗತಿ/ಪದವಿ ಹಾಗೂ ಶಿಕ್ಷಣ ಸಂಸ್ಥೆಯ ಹೆಸರನ್ನು ಪರಿಚಯಿಸಬೇಕು.
ಭಾಷಣವು ಸ್ಪರ್ಧಿಯ ಸ್ವಂತ ಅಭಿವ್ಯಕ್ತಿಯಾಗಿರಬೇಕು. ನಕಲು, ಕೃತಿಚೌರ್ಯ ಅಥವಾ ಕೃತಕ ಬುದ್ಧಿಮತ್ತೆ (AI) ಮೂಲಕ ಸಿದ್ಧಪಡಿಸಿದ ವಿಷಯವನ್ನು ಬಳಸಬಾರದು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ಸ್ಪರ್ಧಿಗಳು ತಮ್ಮ ವಿಡಿಯೋವನ್ನು 9844733973 ಅಥವಾ 7829504709 ಸಂಖ್ಯೆಗಳ ವಾಟ್ಸಾಪ್ ಮೂಲಕ ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9902354807 ಸಂಖ್ಯೆಯನ್ನು ಸಂಪರ್ಕಿಸಬಹುದು.
ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.) ಪ್ರಕಟಣೆಯಲ್ಲಿ ಕೋರಿದೆ.
