Skip to content
Billava News

ಹಿಂದೂಪುರ ಆರ್ಯ ಈಡಿಗ ಸಂಘದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ₹10,000 ಚೆಕ್ ಹಸ್ತಾಂತರ

ಸತ್ಯಸಾಯಿ ಜಿಲ್ಲೆಯ ಹಿಂದೂಪುರ ಪಟ್ಟಣದಲ್ಲಿ ಆರ್ಯ ಈಡಿಗ ಸಂಘದ ಅಧ್ಯಕ್ಷ ಶೇಖರ್ ಹಾಗೂ ಪ್ರಧಾನ ಕಾರ್ಯದರ್ಶಿ ವಿನಯ್ ಅವರ....

By Billavavani
ಹಿಂದೂಪುರ ಆರ್ಯ ಈಡಿಗ ಸಂಘದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ₹10,000 ಚೆಕ್ ಹಸ್ತಾಂತರ

ಹಿಂದೂಪುರ: ಸತ್ಯಸಾಯಿ ಜಿಲ್ಲೆಯ ಹಿಂದೂಪುರ ಪಟ್ಟಣದಲ್ಲಿ ಆರ್ಯ ಈಡಿಗ ಸಂಘದ ಅಧ್ಯಕ್ಷ ಶೇಖರ್ ಹಾಗೂ ಪ್ರಧಾನ ಕಾರ್ಯದರ್ಶಿ ವಿನಯ್ ಅವರ ನೇತೃತ್ವದಲ್ಲಿ, ಈಡಿಗ ಸಮುದಾಯದ ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಮತ್ತು ಪಿಯುಸಿ (ಇಂಟರ್‌ಮೀಡಿಯೇಟ್) ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಆರ್ಯ ಈಡಿಗ ಸಂಘದ ವತಿಯಿಂದ ₹10,000 ಮೊತ್ತದ ಚೆಕ್‌ನ್ನು ಹಸ್ತಾಂತರಿಸಲಾಯಿತು.

1001092279.jpg

ಈ ಕಾರ್ಯಕ್ರಮದಲ್ಲಿ ಬಿಸಿ ಕಲ್ಯಾಣ ಸಚಿವೆ ಶ್ರೀಮತಿ ಸಬಿತಮ್ಮ, ಮಾಜಿ ಸಚಿವ ಕೆ. ಇ. ಪ್ರಭಾಕರ್, ಗೌಡ ಕಾರ್ಪೊರೇಷನ್ ಅಧ್ಯಕ್ಷ ವೀರಂಕಿ ಗುರುಮೂರ್ತಿ ಗೌಡ್, ಗೌರ ಅಧ್ಯಕ್ಷ ಗಂಡ್ಲೂರಿ ನಾಗಭೂಷಣಂ, ಈಡಿಗ ಸಂಘದ ರಾಜ್ಯಾಧ್ಯಕ್ಷ ಮೇಕಲ ವೇಣುಗೋಪಾಲ್, ಉಪಾಧ್ಯಕ್ಷ ಕೊಡತಲ ಸೂರಿಬಾಬು, ಖಜಾಂಚಿ ತುಂಬಲ ನಾರಾಯಣಸ್ವಾಮಿ ಹಾಗೂ ಶ್ರೀರಾಮುಲು, ಪ್ರಸಾದ್, ಶ್ರೀನಿವಾಸುಲು, ವೆಂಕಟೇಶ್, ಪರಕಾಲ ಕೃಷ್ಣಮೂರ್ತಿ, ಸೀತಾರಾಮರಾಜು, ನೀಳ್ಳ ರಾಮಾಂಜನೇಯುಲು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

1001092280.jpg

ಈ ಸಂದರ್ಭದಲ್ಲಿ ಈಡಿಗ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

1001092281.jpg