ಬಿಲ್ಲವ ಮಹಿಳಾ ಘಟಕ ಮಲ್ಪೆ : 'ಆಟಿದ ನೆಂಪುಲೆಗ್ ಒಂಜಿ ದಿನ' ಕಾರ್ಯಕ್ರಮ
ಮಲ್ಪೆ, ಜು. 19: ಬಿಲ್ಲವ ಮಹಿಳಾ ಘಟಕ ಮಲ್ಪೆ ವತಿಯಿಂದ ಮಲ್ಪೆಯ ಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ "ಆಟಿದ ನೆಂಪುಲೆಗ್ ಒಂಜಿ ದಿನ" ಕಾರ್ಯಕ್ರಮ ಭಾನುವಾರ ನಡೆಯಿತು.

ಮಲ್ಪೆ, ಜು. 19: ಬಿಲ್ಲವ ಮಹಿಳಾ ಘಟಕ ಮಲ್ಪೆ ವತಿಯಿಂದ ಮಲ್ಪೆಯ ಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ "ಆಟಿದ ನೆಂಪುಲೆಗ್ ಒಂಜಿ ದಿನ" ಕಾರ್ಯಕ್ರಮ ಭಾನುವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಪೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಶ್ರೀ ಗೋಪಾಲ ಸಿ. ಬಂಗೇರ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಶ್ರೀ ರಾಘು ಪೂಜಾರಿ ಕಲ್ಮಂಜೆ ಅವರು ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರ, ಆಷಾಢ ಮಾಸದ ವಿಶೇಷ ತಿಂಡಿ-ತಿನಿಸುಗಳು ಹಾಗೂ ಆರೋಗ್ಯವರ್ಧಕ ಗಿಡಮೂಲಿಕೆಗಳ ಮಹತ್ವದ ಕುರಿತು ಉಪನ್ಯಾಸ ನೀಡಿ, ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಉಳಿಸುವ ಅಗತ್ಯವನ್ನು ಒತ್ತಿಹೇಳಿದರು. ಇದೇ ಸಂದರ್ಭದಲ್ಲಿ ಬಿಲ್ಲವ ಮಹಿಳಾ ಘಟಕದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಸಮಿತಿಯ ಮಹಿಳಾ ಜಿಲ್ಲಾಧ್ಯಕ್ಷೆ ಶ್ರೀಮತಿ ನಿರೀಕ್ಷಾ ಮೆಂಡನ್ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಶ್ರೀ ರತ್ನಾಕರ್ ಅಮೀನ್, ಪ್ರಧಾನ ಕಾರ್ಯದರ್ಶಿ ಶ್ರೀ ಮನೋಹರ್ ಜತ್ತನ್, ಮಲ್ಪೆ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯ ಶಾಲಾಡಳಿತ ಸಮಿತಿ ಅಧ್ಯಕ್ಷ ಶ್ರೀ ನವೀನ್ ಚಂದ್ರ ಮಲ್ಪೆ, ಭಜನಾ ಸಂಚಾಲಕ ಶ್ರೀ ಎಂ. ಜಗದೀಶ್ ಬಂಗೇರ, ನಾರಾಯಣಗುರು ಸೇವಾದಳದ ಅಧ್ಯಕ್ಷ ಶ್ರೀ ಜಯ ಅಮೀನ್, ಮಹಿಳಾ ಘಟಕದ ಗೌರವಾಧ್ಯಕ್ಷೆ ಶ್ರೀಮತಿ ವಾರಿಜ ಮಧುಸೂದನ್, ಮಾಜಿ ಅಧ್ಯಕ್ಷೆಯರಾದ ಶ್ರೀಮತಿ ವಿಜಯ ಜಿ. ಬಂಗೇರ, ಶ್ರೀಮತಿ ಗೀತಾ ಬಿ. ಪೂಜಾರಿ, ಶ್ರೀಮತಿ ಪ್ರಭಾವತಿ ಯಾದವ್, ಶ್ರೀಮತಿ ಆಶಾ ಜಗದೀಶ್ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಮಹಿಳಾ ಘಟಕದ ಸದಸ್ಯೆಯರು ತಯಾರಿಸಿದ 40 ಬಗೆಯ ಸಾಂಪ್ರದಾಯಿಕ ಖಾದ್ಯಗಳನ್ನು ಪ್ರದರ್ಶಿಸಲಾಯಿತು. ಅವುಗಳ ಪರಿಚಯವನ್ನು ಶ್ರೀಮತಿ ಜಯಲಕ್ಷ್ಮೀ ಶೇಖರ್ ಮಾಡಿಕೊಟ್ಟರು.

ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಶಾಲಿನಿ ರವಿ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಮತಿ ಸುಜಾತಾ ಕೃಷ್ಣ ವಂದಿಸಿದರು. ಸದಸ್ಯೆಯರಾದ ಶ್ರೀಮತಿ ಲತಾ ಜಯಕರ್, ಶ್ರೀಮತಿ ಶಿಲ್ಪಾ ನವೀನ್ ಹಾಗೂ ಶ್ರೀಮತಿ ಸರೋಜಿನಿ ಪ್ರಾರ್ಥನೆ ನೆರವೇರಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ಭಾಗ್ಯಶ್ರೀ ಎಂ. ಕಾರ್ಯಕ್ರಮ ನಿರೂಪಿಸಿದರು.
