Skip to content
Billava News

ನಾರಾಯಣಗುರು ಒಕ್ಕೂಟ ರಚನೆಗೆ ಸಮಾಜದ ರಾಜಕೀಯ ಜನಪ್ರತಿನಿಧಿಗಳ ಮಹತ್ವದ ಸಮಾಲೋಚನಾ ಸಭೆ

ಸಮಾಜದ ಏಕತೆ, ವಿವಿಧ ಸಂಘಟನೆಗಳ ಸಮನ್ವಯ ಹಾಗೂ ಬಲಿಷ್ಠ "ನಾರಾಯಣಗುರು ಒಕ್ಕೂಟ" ರಚಿಸುವ ಉದ್ದೇಶದಿಂದ ಸಮಾಜದ ರಾಜಕೀಯ ಜನಪ್ರತಿನಿಧಿಗಳ ರಾಜ್ಯಮಟ್ಟದ ಸಮಾಲೋಚನಾ ಸಭೆ ಗುರುವಾರ ಬೆಳಿಗ್ಗೆ ಬೆಂಗಳೂರಿನ ಫಾರ್ಚೂನ್ ಪಾರ್ಕ್ ಜೆಪಿ ಸೆಲೆಸ್ಟಿಯಲ್ ಹೋಟೆಲ್‌ನಲ್ಲಿ ನಡೆಯಿತು.

ನಾರಾಯಣಗುರು ಒಕ್ಕೂಟ ರಚನೆಗೆ ಸಮಾಜದ ರಾಜಕೀಯ ಜನಪ್ರತಿನಿಧಿಗಳ ಮಹತ್ವದ ಸಮಾಲೋಚನಾ ಸಭೆ

ಬೆಂಗಳೂರು, ಜುಲೈ 23: ಸಮಾಜದ ಏಕತೆ, ವಿವಿಧ ಸಂಘಟನೆಗಳ ಸಮನ್ವಯ ಹಾಗೂ ಬಲಿಷ್ಠ "ನಾರಾಯಣಗುರು ಒಕ್ಕೂಟ" ರಚಿಸುವ ಉದ್ದೇಶದಿಂದ ಸಮಾಜದ ರಾಜಕೀಯ ಜನಪ್ರತಿನಿಧಿಗಳ ರಾಜ್ಯಮಟ್ಟದ ಸಮಾಲೋಚನಾ ಸಭೆ ಗುರುವಾರ ಬೆಳಿಗ್ಗೆ ಬೆಂಗಳೂರಿನ ಫಾರ್ಚೂನ್ ಪಾರ್ಕ್ ಜೆಪಿ ಸೆಲೆಸ್ಟಿಯಲ್ ಹೋಟೆಲ್‌ನಲ್ಲಿ ನಡೆಯಿತು.

1001095879.jpg

ಸಭೆಯಲ್ಲಿ ಸಮಾಜದ ಪರಮಪೂಜ್ಯ ಸ್ವಾಮೀಜಿಗಳು, ಹಾಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು, ಮಾಜಿ ಶಾಸಕರು, ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಮಾಜದ ಗಣ್ಯರು ಭಾಗವಹಿಸಿ, ಸಮುದಾಯದ ಸಂಘಟನೆಗಳನ್ನು ಒಂದೇ ವೇದಿಕೆಗೆ ತರುವ ಅಗತ್ಯದ ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಸಭೆಯಲ್ಲಿ ಸಮಾಜದ ಸರ್ವಾಂಗೀಣ ಅಭಿವೃದ್ಧಿ, ಸಂಘಟನೆಗಳ ನಡುವೆ ಸಮನ್ವಯ, ಯುವಜನರ ಪಾಲ್ಗೊಳ್ಳುವಿಕೆ, ರಾಜಕೀಯ ಸಬಲೀಕರಣ ಹಾಗೂ ಭವಿಷ್ಯದ ಕಾರ್ಯಯೋಜನೆ ಕುರಿತು ಚರ್ಚೆ ನಡೆಯಿತು. ಸಮಾಜದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಶಾಶ್ವತ ಮತ್ತು ಬಲಿಷ್ಠ ಒಕ್ಕೂಟ ನಿರ್ಮಾಣಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಅಗತ್ಯವನ್ನು ಪ್ರತಿಪಾದಿಸಲಾಯಿತು.

ಸಭೆಯಲ್ಲಿ ಪರಮಪೂಜ್ಯ ಸೋಲೂರು ಮಠದ ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರು, ಶ್ರೀ ಶ್ರೀ ಶ್ರೀ ರೇಣುಕಾನಂದ ಸ್ವಾಮೀಜಿಯವರು, ಶ್ರೀ ಶ್ರೀ ಶ್ರೀ ಅರುಣಾನಂದ ಸ್ವಾಮೀಜಿಯವರು, ಡಾ. ಶ್ರೀ ಶ್ರೀ ಶ್ರೀ ಪ್ರಣವಾನಂದ ಸ್ವಾಮೀಜಿಯವರು, ಶ್ರೀ ಶ್ರೀ ಶ್ರೀ ಯೋಗೇಂದ್ರ ಅವಧೂತ ಸ್ವಾಮೀಜಿಯವರು, ಶ್ರೀ ಶ್ರೀ ಶ್ರೀ ಭೀಮಾಶಂಕರ್ ಸ್ವಾಮೀಜಿಯವರು ಹಾಗೂ ಶ್ರೀ ಶ್ರೀ ಶಂಕರಲಿಂಗ ಸ್ವಾಮೀಜಿಯವರು ಉಪಸ್ಥಿತರಿದ್ದರು.

ಹಾಲಿ ಜನಪ್ರತಿನಿಧಿಗಳಾದ ಬಿ. ಕೆ. ಹರಿಪ್ರಸಾದ್, ವಿ. ಸುನಿಲ್ ಕುಮಾರ್, ಬೇಳೂರು ಗೋಪಾಲಕೃಷ್ಣ, ಎಚ್. ಆರ್. ಗವಿಯಪ್ಪ, ಉಮಾನಾಥ ಕೋಟ್ಯಾನ್ ಹಾಗೂ ಜಗದೇವ್ ಗುತ್ತೇದಾರ್ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಪಾಲ್ಗೊಂಡರು.

ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಹಾಲಪ್ಪ ಹರತಾಳು, ಮಾಲೀಕಯ್ಯ ಗುತ್ತೇದಾರ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಕೆ. ಹರೀಶ್ ಕುಮಾರ್ ಮತ್ತು ಹೆಚ್. ಆರ್. ಶ್ರೀನಾಥ್, ಮಾಜಿ ಶಾಸಕರಾದ ಪ್ರಭಾಕರ್ ಬಂಗೇರ ಹಾಗೂ ಜೆ.ಡಿ. ನಾಯ್ಕ್, ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಇದೇ ವೇಳೆ ಶ್ರೀ ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನ ಹಾಗೂ ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಪ್ರಮುಖ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿ ಸಮಾಜದ ಒಗ್ಗಟ್ಟು ಮತ್ತು ಸಂಘಟನಾ ಬಲವರ್ಧನೆಗೆ ತಮ್ಮ ಸಲಹೆಗಳನ್ನು ನೀಡಿದರು.

ಸಭೆಯು ಸಮಾಜದ ಸಂಘಟನೆಗಳು ಮತ್ತು ಜನಪ್ರತಿನಿಧಿಗಳ ನಡುವೆ ಸಮನ್ವಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲ್ಪಟ್ಟಿದ್ದು, ಸಮುದಾಯದ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಮುಂದುವರಿಯುವ ಸಂಕಲ್ಪವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.

Found this useful? Share it.
Share

Relatedಸಂಬಂಧಿತ

ಯುವವಾಹಿನಿ ಕೊಲ್ಯ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ: ₹1 ಲಕ್ಷ 43 ಸಾವಿರ ವಿದ್ಯಾನಿಧಿ ವಿತರಣೆ
Billava News

ಯುವವಾಹಿನಿ ಕೊಲ್ಯ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ: ₹1 ಲಕ್ಷ 43 ಸಾವಿರ ವಿದ್ಯಾನಿಧಿ ವಿತರಣೆ

ಯುವವಾಹಿನಿ (ರಿ) ಕೊಲ್ಯ ಘಟಕದ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಗುರುಪೂಜೆಯೊಂದಿಗೆ ಘಟಕದ ಅಧ್ಯಕ್ಷ ಶ್ರೀ ನಿತಿನ್ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ನಡೆಯಿತು.

8h ago
ಬಿಲ್ಲವ ಮಹಿಳಾ ಘಟಕ ಮಲ್ಪೆ : 'ಆಟಿದ ನೆಂಪುಲೆಗ್ ಒಂಜಿ ದಿನ' ಕಾರ್ಯಕ್ರಮ
Billava News

ಬಿಲ್ಲವ ಮಹಿಳಾ ಘಟಕ ಮಲ್ಪೆ : 'ಆಟಿದ ನೆಂಪುಲೆಗ್ ಒಂಜಿ ದಿನ' ಕಾರ್ಯಕ್ರಮ

ಮಲ್ಪೆ, ಜು. 19: ಬಿಲ್ಲವ ಮಹಿಳಾ ಘಟಕ ಮಲ್ಪೆ ವತಿಯಿಂದ ಮಲ್ಪೆಯ ಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ "ಆಟಿದ ನೆಂಪುಲೆಗ್ ಒಂಜಿ ದಿನ" ಕಾರ್ಯಕ್ರಮ ಭಾನುವಾರ ನಡೆಯಿತು.

10h ago
ಪ್ರಾಣ ಪಣಕ್ಕಿಟ್ಟು ಯುವತಿಯನ್ನು ರಕ್ಷಿಸಿದ ಉದಯ ಕುಮಾರ್ ಶೆಟ್ಟಿ ದೇರಂಬಳಗೆ ಬಿರುವೆರ್ ಕುಡ್ಲ ಮಂಜೇಶ್ವರ ಸನ್ಮಾನ
Billava News

ಪ್ರಾಣ ಪಣಕ್ಕಿಟ್ಟು ಯುವತಿಯನ್ನು ರಕ್ಷಿಸಿದ ಉದಯ ಕುಮಾರ್ ಶೆಟ್ಟಿ ದೇರಂಬಳಗೆ ಬಿರುವೆರ್ ಕುಡ್ಲ ಮಂಜೇಶ್ವರ ಸನ್ಮಾನ

ಪ್ರಾಣ ಪಣಕ್ಕಿಟ್ಟು ಯುವತಿಯನ್ನು ರಕ್ಷಿಸಿದ ಉದಯ ಕುಮಾರ್ ಶೆಟ್ಟಿ ದೇರಂಬಳಗೆ ಬಿರುವೆರ್ ಕುಡ್ಲ ಮಂಜೇಶ್ವರ ಸನ್ಮಾನ

1d ago
ಬಿಲ್ಲವಾಸ್ ಫ್ಯಾಮಿಲಿ ದುಬೈ ಅಧ್ಯಕ್ಷರಾಗಿ ದೀಪಕ್ ಎಸ್.ಪಿ. 2ನೇ ಬಾರಿಗೆ ಅವಿರೋಧ ಆಯ್ಕೆ
Billava News

ಬಿಲ್ಲವಾಸ್ ಫ್ಯಾಮಿಲಿ ದುಬೈ ಅಧ್ಯಕ್ಷರಾಗಿ ದೀಪಕ್ ಎಸ್.ಪಿ. 2ನೇ ಬಾರಿಗೆ ಅವಿರೋಧ ಆಯ್ಕೆ

ದುಬೈ: ಯುಎಇಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಬಿಲ್ಲವಾಸ್ ಫ್ಯಾಮಿಲಿ ದುಬೈ ಸಂಘಟನೆಯ 2026-2028ನೇ ಸಾಲಿನ ಪದಗ್ರಹಣ ಸಮಾರಂಭವು ಜುಲೈ 11, 2026ರಂದು ದುಬೈಯ ಪ್ರತಿಷ್ಠಿತ ಹೋಟೆಲೊಂದರಲ್ಲಿ ಸರಳ ಹಾಗೂ ಅರ್ಥಪೂರ್ಣವಾಗಿ ನಡೆಯಿತು.

1d ago