ಕಾಸರಗೋಡು ನೆಲ್ಲಿಕಟ್ಟೆ ಪ್ರಕೃತಿ ಆಯುರ್ವೇದ ಆಸ್ಪತ್ರೆಯಲ್ಲಿ ಸಂಭ್ರಮದಿಂದ ನಡೆದ "ಆಟಿ ದಿನದ ವೈಭವ"
ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ), ಕಾಸರಗೋಡು, ಡಾ. ವಾಣಿಶ್ರೀ ಕಾಸರಗೋಡು ಅವರ ಸಾರಥ್ಯದಲ್ಲಿ ಹಾಗೂ ವಿಶ್ವ ತುಳುವೆರ್ (ರಿ.) ಕೇರಳ ಘಟಕದ ಸಹಯೋಗದಲ್ಲಿ...

ಕಾಸರಗೋಡು, ಜು. 23: ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ), ಕಾಸರಗೋಡು, ಡಾ. ವಾಣಿಶ್ರೀ ಕಾಸರಗೋಡು ಅವರ ಸಾರಥ್ಯದಲ್ಲಿ ಹಾಗೂ ವಿಶ್ವ ತುಳುವೆರ್ (ರಿ.) ಕೇರಳ ಘಟಕದ ಸಹಯೋಗದಲ್ಲಿ "ಆಟಿ ದಿನದ ವೈಭವ" ಎಂಬ ಗ್ರಾಮೀಣ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ 234ನೇ ವಿಶೇಷ ಕಾರ್ಯಕ್ರಮವು ನೆಲ್ಲಿಕಟ್ಟೆ ಚೂರಿಪ್ಪಳ್ಳದ ಪ್ರಕೃತಿ ಆಯುರ್ವೇದ ಚಿಕಿತ್ಸಾಲಯದ ಶ್ರೀಗಿರಿ ಸದನದ ಶಿವದುರ್ಗಾ ವೇದಿಕೆ ಹಾಗೂ ಪೊಟ್ಟಿಪ್ಪಲ ನಾರಾಯಣ ಭಟ್ ವೇದಿಕೆಯಲ್ಲಿ ಅರ್ಥಪೂರ್ಣವಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂಘದ ಕೋಶಾಧಿಕಾರಿ ಹಾಗೂ ಖ್ಯಾತ ಆಯುರ್ವೇದ ವೈದ್ಯರಾದ ಡಾ. ವೆಂಕಟಗಿರೀಶ್ ಅವರು ಆಟಿ ತಿಂಗಳ ಮಹತ್ವವನ್ನು ವಿವರಿಸಿ, ಹಿಂದಿನ ಕಾಲದಲ್ಲಿ ರೈತರು ಕೃಷಿ ಕಾರ್ಯಗಳನ್ನು ಮುಗಿಸಿದ ಬಳಿಕ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸ್ಥಳೀಯವಾಗಿ ದೊರೆಯುವ ಗೆಡ್ಡೆ-ಗೆಣಸು, ಸೊಪ್ಪು ಹಾಗೂ ಔಷಧೀಯ ಸಸ್ಯಗಳಿಂದ ತಯಾರಿಸಿದ ಆಹಾರವನ್ನು ಸೇವಿಸುವ ಸಂಪ್ರದಾಯವಿತ್ತು ಎಂದು ತಿಳಿಸಿದರು.

ಸಂಘದ ಅಧ್ಯಕ್ಷೆಯೂ ಆಯುರ್ವೇದ ವೈದ್ಯೆಯೂ ಆದ ಡಾ. ವಾಣಿಶ್ರೀ ಕಾಸರಗೋಡು ಅವರು ಸುತ್ತಮುತ್ತಲಿನ ಪರಿಸರದಲ್ಲಿ ದೊರೆಯುವ ವಿವಿಧ ಗಿಡಮೂಲಿಕೆಗಳು, ಗೆಡ್ಡೆ-ಗೆಣಸುಗಳು ಹಾಗೂ ಸೊಪ್ಪುಗಳ ಪರಿಚಯ ಮಾಡಿಸಿ, ಅವುಗಳ ಔಷಧೀಯ ಗುಣಗಳು ಮತ್ತು ಆರೋಗ್ಯಕರ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು.
ಸಂಘದ ಕಾರ್ಯದರ್ಶಿ ಶ್ರೀ ಸುರೇಶ್ ಉಡುಪಿ ಅವರು ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಿ, ಅಗತ್ಯ ಮಾಹಿತಿಗಳನ್ನು ನೀಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಈ ಸಂದರ್ಭದಲ್ಲಿ ಆಟಿ ತಿಂಗಳಲ್ಲಿ ಸಾಂಪ್ರದಾಯಿಕವಾಗಿ ತಯಾರಿಸುವ ವಿಶೇಷ ಅಡುಗೆಗಳು ಹಾಗೂ ಖಾದ್ಯಗಳನ್ನು ಸಿದ್ಧಪಡಿಸಿ ನೆರೆದವರಿಗೆ ವಿತರಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಲಾರತ್ನಗಳಾದ ಆರಾಧ್ಯ, ಶ್ರೇಯಾ ಪ್ರಕಾಶ್, ಶ್ರೇಯ ನಾಗೇಶ್, ಜಯ, ಲೋಹಿತ್, ಮಧುಕರ್ ಹಾಗೂ ಅನಿತ ಅವರು ಕನ್ನಡ ಮತ್ತು ತುಳು ಭಾಷೆಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಡಾ. ವಾಣಿಶ್ರೀ ಅವರು ಸಾಹಿತ್ಯ ಪ್ರಸ್ತುತಪಡಿಸಿದ್ದು, ಕಲಾವಿದರಿಗೆ ತಾವು ರಚಿಸಿದ 'ಪ್ರಕೃತಿ ಕೃತಿ', 'ರಾಣಿ ಅಬ್ಬಕ್ಕ ಜೊತೆ ಪಯಣ' ಸೇರಿದಂತೆ ವಿವಿಧ ಪುಸ್ತಕಗಳನ್ನು ನೀಡಿ ಗೌರವಿಸಿದರು.
ಆಟಿ ತಿಂಗಳ ವಿಶೇಷತೆ, ಗ್ರಾಮೀಣ ಆಚರಣೆಗಳು ಹಾಗೂ ಆರೋಗ್ಯಪರ ಜೀವನಶೈಲಿಯ ಮಹತ್ವವನ್ನು ಪರಿಚಯಿಸಿದ ಈ ಕಾರ್ಯಕ್ರಮವು ನೆರೆದವರ ಮೆಚ್ಚುಗೆಗೆ ಪಾತ್ರವಾಗಿ ಯಶಸ್ವಿಯಾಗಿ ನೆರವೇರಿತು.
Relatedಸಂಬಂಧಿತ

ಕಾರಂದೂರು ಬರ್ಕೆದ ಬಾರಗೆ ಕಾಂಜ ಬೈದ್ಯೆರೆ ಪರತಿರಿ...
Special Credits to @biruva_heritage...
1d ago
ವಿಶ್ವ ತುಳುವೆರ್ (ರಿ) ಕೇರಳ ಘಟಕದ ಅಧ್ಯಕ್ಷರಾಗಿ ಡಾ. ವಾಣಿಶ್ರೀ ಕಾಸರಗೋಡು ಆಯ್ಕೆ
ವಿಶ್ವ ತುಳುವೆರ್ (ರಿ) ಕೇರಳ ಘಟಕದ ಅಧ್ಯಕ್ಷರಾಗಿ ಡಾ. ವಾಣಿಶ್ರೀ ಕಾಸರಗೋಡು ಅವರು ಆಯ್ಕೆಯಾಗಿದ್ದಾರೆ.
2d ago
ಕೌಡೋಡಿ ಗುತ್ತುದ ಬಂಟೆದಿ ಬೊಲ್ಲಕ್ಕು ಬೈದ್ಯೆತಿ :ಗುತ್ತುಗ್ ಬಂಟೆ, ಕಂಬುಲಗ್ ಪೂಂಕರೆ, ಬಾಕ್ಯಾರ್ ಗ್ ಬಾರೆ
Special Credits to @biruva_heritage...
3d ago
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ; ನವೀನ್ ಡಿ ಪಡೀಲ್ ಅಭಿನಯದ ಹಾಗು ಶಿವಧ್ವಜ್ ಶೆಟ್ಟಿ ನಿರ್ಮಾಣದ ಇಂಬು ತುಳು ಸಿನಿಮಾ ಕ್ಕೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
‘ಇಂಬು’ ಚಿತ್ರವು ತುಳು ಚಿತ್ರರಂಗಕ್ಕೆ ಮತ್ತೊಂದು ಗರಿಮೆಯನ್ನು ತಂದಿದೆ. ಶಿವಧ್ವಜ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಸಂತೋಷ್ ಪೂಜಾರಿ ವೇಣೂರು
6d ago